ರಾಮನಗರದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಚಾಲನೆನೀಡಿದರು.  
ಬೆಂಗಳೂರು ದಕ್ಷಿಣ

ವಾಹನ ಚಲಾವಣೆ ವೇಳೆ ಮೈ ಮರೆಯದಿರಿ

ಗಂಗಾಧರ ಬಿ ವಿ

ಪ್ರಮುಖ ಮುಖ್ಯಾಂಶಗಳು

  • 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ
  • ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ರಿಂದ ಚಾಲನೆ
  • ಸಂಚಾರ ನಿಯಮ ಪಾಲನೆಗೆ ಕರೆ
ರಾಮನಗರ: ಒಂದು ಕ್ಷಣದ ನಿರ್ಲಕ್ಷ್ಯ ಇಡೀ ಬದುಕನ್ನೇ ದುಸ್ತರ ಮಾಡುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಅಪಾಯಕಾರಿಯಾಗಿದ್ದು, ಅವಲಂಬಿತರನ್ನು ಅನಾಥವಾಗಿಸುವ ಅವಘಡಗಳ ತಡೆಗೆ ನಿಯಮಪಾಲನೆ ಅಗತ್ಯ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಜಾಥಾ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದೇ, ವೇಗದ ಮಿತಿ ಅನುಸರಿಸಿ, ಕಡ್ಡಾಯವಾಗಿ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸುವಂತೆ ಅವರು ಕರೆ ನೀಡಿದರು.
ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗÊತಿ ಮೂಡಿಸಬೇಕು, ಅವರಿಗೆ ವಾಹನ ಚಾಲನೆಯ ವೇಗದ ಮಿತಿ, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್‌ಗಳನ್ನು ಧರಿಸಿವುದರಿಂದ ಆಗುವ ಪ್ರಯೋಜನಗಳು ಬಗ್ಗೆ ತಿಳಿಸಿಕೊಡಬೇಕು, ರಾಷ್ಟಿçÃಯ ರಸ್ತೆ ಸುರಕ್ಷಿತ ಮಾಸಾಚರಣೆ ಕಾರ್ಯಕ್ರಮಗಳ ಮೂಲಕ ರಸ್ತೆ ಸುರಕ್ಷತೆ ಹಾಗೂ ಚಾಲನಾ ನಿಯಮಗಳ ಮೂಲಕ ವಾಹನಗಳ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅರಿವು ಮೂಡಿಸುವಂತೆ ತಿಳಿಸಿದರು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು, ಕುಡಿದು ವಾಹನ ಓಡಿಸಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು, ಅತಿ ವೇಗವಾಗಿ ವಾಹನಗಳನ್ನು ಚಾಲನೆ ಮಾಡಬಾರದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಇತಿಮಿತಿಯ ವೇಗದಲ್ಲಿ ಚಾಲನೆ ಮಾಡಿದರೆ ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯದು ಎಂದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮಾತನಾಡಿ, ಸ್ಟೇಜ್ ಯೂನಿಟ್‌ಗಳಲ್ಲಿ ವಾಹನ ಚಲಾಯಿಸುವಾಗ ಎಲ್ಲರನ್ನೂ ಗಮನಿಸಬೇಕು. ಅತಿ ವೇಗದಲ್ಲಿ ವಾಹನ ಚಲಾಯಿಸುವಾಗ ಸಾವುನೋವು ಸಂಭವಿಸುವ ಸಂದರ್ಭಗಳಿರುತ್ತದೆ. ಎಲ್ಲರ ಜೀವಗಳು ಮುಖ್ಯವಾಗಿರುತ್ತದೆ. ಇದನ್ನು ಅರಿತು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಿ, ವಾಹನ ಚಲಾಯಿಸುವಂತೆ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಬಾಬು ಅವರು ಮಾತನಾಡಿ, 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜಿಲ್ಲೆಯ ಹಲವಾರು ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.
ವಾಹನ ಚಲಾವಣೆ ಮಾಡುವಾಗ ಕೈ ನಲ್ಲಿ ಯಾವ ರೀತಿ ಸಿಗ್ನಲ್‌ಗಳನ್ನು ತೋರಿಸಬೇಕು. ಹೆಲ್ಮೆಟ್ ಧರಿಸದೇ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಅನ್ವಯವಾಗುವ ಕಾನೂನು ನಿಯಮಗಳ ಬಗ್ಗೆ, ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ಹಾಗೂ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರುವ ಕುರಿತು ಮತ್ತು ಸೇಫ್ಟಿ ಬೆಲ್ಟ್ ಧರಿಸುವ ಬಗ್ಗೆ ಜಾಗÊತಿ ಮೂಡಿಸಲಾಗಿದೆ. ಟೊಯೋಟಾ, ಬಾಶ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 300 ಕ್ಕೂ ನೌಕರರಿಗೆ ರಾಷ್ಟಿçÃಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಮುಖ್ಯ ಅಂಶಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ನಿವೃತ್ತ ಸಾರಿಗೆ ಅಧೀಕ್ಷಕ ಎಂಜಿಎ ಪ್ರಸಾದ್, ಆರ್‌ಟಿಒ ನಿರೀಕ್ಷಕಿ ವಿದ್ಯಾ, ಕುಮಾರಸ್ವಾಮಿ, ಬಾಲಾಜಿ ಡ್ರೈವಿಂಗ್ ಸ್ಕೂಲ್‌ನ ಪ್ರಾಂಶುಪಾಲ ವಾಸುದೇವ್, ವಂಡರ್ ಲಾ ಸಿಬ್ಬಂದಿಗಳು ಸೇರಿದಂತೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.