ಕನಕಪುರ ಮಳಗಾಳು ಗ್ರಾಮದಲ್ಲಿ ಚಿರತೆ ದಾಳಿಯಿಂದ ಎಮ್ಮೆ ಕರು ಮೃತಪಟ್ಟಿದೆ. ಮರಸಪ್ಪ ರವಿ, ಮನು, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಮಾಗಡಿ: ತಾಲೂಕಿನ ಆಲೂರಿನಲ್ಲಿ ನಾಯಿಗಳು ದನಗಾಹಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.
ಆಲೂರು ಗ್ರಾಮದ ವರದರಾಜು (75) ಗಾಯಾಳು. ಭಾನುವಾರ ಹೊಲದಲ್ಲಿ ದನ ಮೇಯಿಸಿಕೊಂಡು ಬರುತ್ತಿದ್ದ ವರದರಾಜು ಮೇಲೆ ದಾಳಿ ಮಾಡಿ ಕೈ, ಸೊಂಟಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ಗಾಯಾಳುವನ್ನು ಕೂಡಲೇ ಸೋಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ರೌಡಿಶೀಟರ್ವೊಬ್ಬರು ವಿದೇಶಿ ನಾಯಿಗಳನ್ನು ಸಾಕಿದ್ದರು. ಆದರೆ, ಪ್ರಕರಣವೊಂದರ ಸಂಬಂಧ ಅವರು ಜೈಲಿನಲ್ಲಿದ್ದು, ನಾಯಿಗಳಿಗೆ ಊಟವಿಲ್ಲದೆ ಅವುಗಳನ್ನು ಬಿದಿಗೆ ಅಟ್ಟಲಾಗಿದೆ. ಅನ್ನ&ನೀರಿಲ್ಲದೆ ಹಸಿದ ನಾಯಿಗಳು ಸಾರ್ವಜನಿಕರು ಮತ್ತು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ ಎನ್ನಲಾಗಿದೆ. ವೃದ್ಧನ ಮೇಲೆ ನಾಯಿಗಳು ದಾಳಿ ಮಾಡಿರುವ ಸಂಬಂಧಿಸಿದಂತೆ ಬಾಣವಾಡಿ ಪಿಡಿಒ ಗಮನಕ್ಕೆ ತರುವುದಾಗಿ ವರದರಾಜು ಸಂಬಂಧಿ ಹೇಮಂತ್ ಮಾಹಿತಿ ನೀಡಿದ್ದಾರೆ.