ಸರಸ್ವತಿ 
ಬೆಂಗಳೂರು ದಕ್ಷಿಣ

ವೈದ್ಯನ ಸಹಾಯಕಿಯೂ ಆತ್ಮಹತ್ಯೆ

ರೇಷ್ಮೆ ನಗರ ಡೆಸ್ಕ್
ಕನಕಪುರ: ನಗರದ ಖಾಸಗಿ ಆಸ್ಪತ್ರೆ ವೈದ್ಯ ಡಾ.ಚೇತನ್​ ಟೆಂಕರ್​ ಆತ್ಮಹತ್ಯೆ ಬೆನ್ನಲ್ಲೇ ಆಸ್ಪತ್ರೆಯ ಸಹಾಯಕಿ ಸರಸ್ವತಿ (45) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಾ.ಚೇತನ್​ ಬುಧವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಂಸಾರಿಕ ಕಲಹದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿದ್ದರು ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಸುದ್ದಿ ಮಾಸುವ ಮುನ್ನವೇ ಗುರುವಾರ ರಾತ್ರಿ ಮುನ್ಸಿಪಲ್​ ಹೈಸ್ಕೂಲ್​ ಮೈದಾನ ಬಳಿಯ ವೈದ್ಯರ ಮನೆಯ 2ನೇ ಅಂತಸ್ತಿನಲ್ಲಿ ಕೊಠಡಿಯಲ್ಲಿ ಸರಸ್ವತಿ ನೇಣಿಗೆ ಶರಣಾಗಿದ್ದಾರೆ.
ವೈದ್ಯ ಹಾಗೂ ಸಹಾಯಕಿ ಸಾವಿನ ಪ್ರಕರಣ ಹಲವು ಸಂಶಯಗಳಿಗೆ ಎಡೆಮಾಡಿದೆ. ಸರಸ್ವತಿಯ ಸಹೋದರ ಅಶ್ವತ್ಥ ನಗರ ಠಾಣೆಗೆ ನೀಡಿದ ದೂರಿನ ಮೆರೆಗೆ ಪೊಲೀಸರು ಯುಡಿಆರ್​ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.