ಮಾಗಡಿ ಪಟ್ಟಣದಲ್ಲಿ ಕರವೇ ತಾಲೂಕು ಅಧ್ಯ ವಿಶ್ವನಾಥ್​ ಅವರು ಮನೆ ದಾಕಲಾತಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿದರು. ಕಾಳೇಗೌಡ, ಜಯರಾಂ ಹಾಗೂ ಇತರರು ಇದ್ದರು. 
ಬೆಂಗಳೂರು ದಕ್ಷಿಣ

ನಿರ್ಮಾಣ ಹಂತದ ಕಟ್ಟಡ ನೆಲಸಮ

ಜಾಗದ ವ್ಯಾಜ್ಯದಲ್ಲಿ ಪರ&ವಿರೋಧ ದೂರು ದಾಖಲು

ಮಾಗಡಿ: ತಾಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಡ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡವನ್ನು ಕೆಡವಲಾಗಿದೆ.

ಏನಿದು ಪ್ರಕರಣ? 

ಗ್ರಾಮದ ಹನುಮಯ್ಯ ಹಳೇ ಮನೆ ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿದ್ದರು. ಅದಕ್ಕಾಗಿ ಹಂಚಿಕುಪ್ಪೆ ಗ್ರಾಮ ಪಂಚಾಯಿತಿಯಿಂದ ನಿವೇಶನದ ಇ&ಖಾತೆ ಪಡೆದಿದ್ದರು. ಆದರೆ, ಹನುಮಯ್ಯ ಸಂಬಂಧಿ ಕಾಳೇಗೌಡ ಹಾಗೂ ಪುತ್ರ ಜಯರಾಮು, ಗ್ರಾಮದ ಗಂಗರಾಜು, ಕರಲುಮಂಗಲದ ವಿಶ್ವನಾಥ್​ ಇತರರು ನ.12ರ ರಾತ್ರಿ ಕಟ್ಟಡವನ್ನು ಕೆಡವಿದ್ದಾರೆೆ. ಈ ವೇಳೆ ಗಲಾಟೆಯಾಗಿದ್ದು, ಪತ್ನಿ ಚಂದ್ರಕಲಾ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ವಿಶ್ವನಾಥ್​ ದೋಚಿದ್ದಾನೆ. ಪುತ್ರ ರು ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಗಡಿ ಠಾಣೆಯಲ್ಲಿ ಹನುಮಯ್ಯ ದೂರು ನೀಡಿದ್ದಾರೆ.

8 ದಶಕಗಳಿಂದ ಇದೇ ಮನೆಯಲ್ಲಿ ವಾಸ?

ಕಳೆದ 80 ವರ್ಷಗಳಿಂದಲೂ ಮನೆಯಲ್ಲಿ ವಾಸವಾಗಿದ್ದು, ತಂದೆ ಜವರಪ್ಪ ಹೆಸರಿನಲ್ಲಿ ದಾಖಲೆಗಳಿವೆ. ಆದರೆ ಈ  ಜಾಗದಲ್ಲಿ ರಾಗಿ ಬೆಳೆಯಲಾಗುತ್ತಿದೆ ಎಂದು ಕಾಳೇಗೌಡ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನಿಷೇಧಾೆ ತಂದಿದ್ದರು. ನಾವು ಸಹ ನ್ಯಾಯಾಲಯಕ್ಕೆ ಮಾಹಿತಿ ತಿಳಿಸಿ, ಸ್ವತ್ತಿನ ಮೇಲೆ ಆೇಪಣೆ ಮಾಡಬಾರದೆಂದು ಕೋರ್ಟ್​ನಿಂದ ಆದೇಶ ಪಡೆದು ಮನೆ ನಿರ್ಮಿಸುತ್ತಿದ್ದೆವು. ಆದರೆ ಮನೆ ಕೆಡವಿದ್ದಾರೆ ಎಂದು ಹನುಮಯ್ಯ ದೂರಿನಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ಜಾಗ ಒತ್ತುವರಿ?

ಗ್ರಾಮದ ಮುಖ್ಯ ರಸ್ತೆಯಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನಕ್ಕೆ ಮೀಸಲಿಟ್ಟಿರುವ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿರುವ ಹನುಮಯ್ಯ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಪ್ರಕರಣದ ಆರೋಪಿಯೂ ಆಗಿರುವ ಕರವೇ ತಾಲೂಕು ಅಧ್ಯ ವಿಶ್ವನಾಥ್​ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಮ್ಮ ತಾತ 1954ರಲ್ಲಿ ಈ  ಜಾಗವನ್ನು ಖರೀದಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಕೊಟ್ಟಿದ್ದರು. ಆಗ ತಾತ್ಕಾಲಿಕವಾಗಿ ವಾಸ ಮಾಡಲು ಹನುಮಯ್ಯ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ಕಾಗದ ಪತ್ರ ಮಾಡಿಕೊಟ್ಟಿಲ್ಲ. ಆದರೂ ಹನುಮಯ್ಯ ಅಕ್ರಮವಾಗಿ ಮನೆ ನಿರ್ಮಿಸಲು ಮುಂದಾಗಿದ್ದು, ಇದನ್ನು ಪ್ರಶ್ನಿಸಿದರೆ ನಮ್ಮನ್ನು  ನಿಂದಿಸಿದ್ದಲ್ಲದೇ ಹಲ್ಲೆಗೂ ಯತ್ನಿಸಿದ್ದಾರೆ. ಈ ಸಂಬಂಧ ಹನುಮಯ್ಯ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಲಾಗುವುದು ಎಂದು ವಿಶ್ವನಾಥ್​ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಳೇಗೌಡ, ಜಯರಾಂ ಹಾಗೂ ಇತರರು ಇದ್ದರು.