ಕುದೂರು ಪಟ್ಟಣದ ಕೋಟೆ ಬೀದಿ ಸರ್ಕಲ್​ ಬಳಿ ಹೈಮಾಸ್ಟ್​ ನೂತನ ದೀಪಗಳ ಅಳವಡಿಕೆಗೆ ದೀಪ ತೆಗೆದಿರುವುದು. 
ಬೆಂಗಳೂರು ದಕ್ಷಿಣ

ಹೈಮಾಸ್ಟ್​ ದೀಪ ದುರಸ್ತಿಗೆ ಆಗ್ರಹ

ಕುದೂರು:

ಪಟ್ಟಣದ ಕೋಟೆ ಬೀದಿ ಸರ್ಕಲ್​ನಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್​ ದೀಪ ಹಾಳಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಅನುಭವಿಸುವಂತಾಗಿದೆ.

ರಾತ್ರಿ ವೇಳೆ ಪ್ರಮುಖ ರಸ್ತೆ ಹಾಗೂ ಜನಬಿಡ ಪ್ರದೇಶದಲ್ಲಿ ಕತ್ತಲು ಆವರಿಸಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ಸಂಜೆ ಹಾಗೂ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಹಾಗೂ ವೃದ್ಧರ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಹೈಮಾಸ್ಟ್​ ದೀಪದ ತಾಂತ್ರಿಕ ದೋಷ ಪರಿಶೀಲಿಸಿ, ಅಗತ್ಯವಿರುವ ದೀಪಗಳು ಹಾಗೂ ವಿದ್ಯುತ್​ ಉಪಕರಣ ದುರಸ್ತಿಪಡಿಸಿ ಶ್ರೀದಲ್ಲೇ ಪುನ@ ಕಾರ್ಯಾರಂಭಗೊಳಿಸಬೇಕು ಸ್ಥಳಿಯರು ಆಗ್ರಹಿಸಿದರು.

ಹೈಮಾಸ್ಟ್​ ದೀಪ ತೆಗೆದು ಹೊಸ ದೀಪ ಎರಡು ದಿನಗಳಲ್ಲಿ ಹಾಕಲಾಗುವುದೆಂದು ಪಿಡಿಒ ಸತೀಶ್​ ತಿಳಿಸಿದ್ದಾರೆ.