ಮಾಗಡಿ: ಮಂಚನಬೆಲೆ ಜಲಾಶಯಕ್ಕೆ ಈಜಲು ಹೋಗಿದ್ದ ಒಡಿಶಾ ಮೂಲದ ರಾಕೇಶ್ (27) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈತ ಬೆಂಗಳೂರಿನ ವೈಟ್ಫೀಲ್ಡ್ ಬಳಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ.
ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಮಂಚನಬೆಲೆ ಜಲಾಶಯಕ್ಕೆ ಪ್ರವಾಸಕ್ಕೆ ಬಂದಿದ್ದು, ಜಲಾಶಯದಲ್ಲಿ ಈಜಲು ಇಳಿದಿದ್ದಾರೆ. ಆದರೆ, ನೀರಿನ ಆಳದ ಅರಿವಿಲ್ಲದೆ ರಾಕೇಶ್ ಮುಳುಗಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ.ಜಿ.ಉತ್ತಪ್ಪ ನೇತೃತ್ವದಲ್ಲಿ ಸಿಬ್ಬಂದಿ ಎಂ.ಮೂರ್ತಿ, ಅಮೃತೇಶ್, ಸಿದ್ದಣ್ಣ ಮಗದೂಮ್ ಹಾಗೂ ಮಹೇಶ್ ಪೂಜಾರಿ ತಂಡವು ಕಾರ್ಯಾಚರಣೆ ನಡೆಸಿ, ಯುವಕನ ಮೃತದೇಹ ಹೊರತೆಗೆದರು. ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.