ಇಟ್ಟಮಡು ಗ್ರಾಮದಲ್ಲಿ ರಾಮಚಂದ್ರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಪಡೆದರು.  
ಬೆಂಗಳೂರು ದಕ್ಷಿಣ

ರಾಮಚಂದ್ರಪ್ಪ ಕುಟುಂಬಕ್ಕೆ ಡಿಸಿಎಂ ಸಾಂತ್ವನ

ಬಿಡದಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಡದಿ ಪುರಸಭೆ ಹಾಲಿ ಸದಸ್ಯ ರಾಮಚಂದ್ರಪ್ಪ(78) ಅವರು ಭಾನುವಾರ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಇಟ್ಟಮಡು ಗ್ರಾಮದ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಿಕಟವರ್ತಿಯಾಗಿದ್ದ ರಾಮಚಂದ್ರಪ್ಪ ಸಮಾಜ ಸೇವೆ ಹಾಗೂ ಜನಪರ ಕಾಳಜಿ ಹೊಂದಿದ್ದರು. ಅವರ ನಿಧನ ದು@ಖ ತಂದಿದ್ದು, ಅವರ ಆತ್ಮಕ್ಕೆ ದೇವರು ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬಸ್ಥರಿಗೆ, ಬೆಂಬಲಿಗರಿಗೆ ದು@ಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಬಿಡಿಎ ಅಧ್ಯ ಗಾಣಕಲ್​ ನಟರಾಜ್​, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್​ ಉಪಾಧ್ಯ ಎಲ್​.ಚಂದ್ರಶೇಖರ್​, ಮುಖಂಡರಾದ ಸತೀಶ್​ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.