ಕನಕಪುರ: ನಗರ ಹೊರವಲಯದ ಮಹಾರಾಜರ ಕಟ್ಟೆ ಸಮೀಪ ಆಟೋ ಡಿಕ್ಕಿಯಾಗಿ ಸೈಕಲ್ ಸವಾರ, ಮಹಾರಾಜರ ಕಟ್ಟೆಯ ತಿಮ್ಮಯ್ಯ(65) ಮೃತಪಟ್ಟಿದ್ದು, ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸೋಮವಾರ ಬೆಳಗ್ಗೆ ತಿಮ್ಮಯ್ಯ ಅವರು ಸೈಕಲ್ನಲ್ಲಿ ನಗರಕ್ಕೆ ಬರುತ್ತಿದ್ದ ವೇಳೆ ಸಾತನೂರು ಕಡೆಯಿಂದ ಬಂದ ಆಟೋ ಡಿಕ್ಕಿಯಾಗಿ, ತಲೆ, ಕಾಲಿಗೆ ತೀವ್ರ ಗಾಯವಾಗಿದೆ. ಆಟೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಿಮ್ಮಯ್ಯ ಅವರನ್ನು ಬೆಂಗಳೂರಿನ ದಯಾನಂದ್ ಸಾಗರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪಾಂಡು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.