ಕೈಲಾಂಚ ಹೋಬಳಿ ತುಂಬೇನಹಳ್ಳಿಯಲ್ಲಿ ಆನೆಗಳ ದಾಳಿಯಿಂದ ನಾಶವಾದ ರೈತರ ಫಸಲು ವೀಕ್ಷಣೆ ನಡೆಸುತ್ತಿರುವ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್. ಅರಣ್ಯ ರಕ್ಷಕ ಶಾಂತಕುಮಾರ್ ಇದ್ದರು.
ಕೈಲಾಂಚ: ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ತುಂಬೇನಹಳ್ಳಿಯಲ್ಲಿ ಮೂರು ಆನೆಗಳು ಸೋಮವಾರ ರಾತ್ರಿ ದಾಳಿ ನಡೆಸಿ ಮೋಹನ್ಕುಮಾರ್, ರವಿಶಂಕರ್ ಅವರ ಸಫೋಟ ಮರಗಳು, ಮಲ್ಲೇಗೌಡ ಅವರ ಬೋರ್ವೆಲ್, ಬಸವರಾಜು ಅವರ ಅಡಕೆ, ಕೇತೋಹಳ್ಳಿಯ ಶಂಕರ್ ಅವರ ಸೋಲಾರ್ ಪರಿಕರ ನಾಶಪಡಿಸಿವೆೆ.
ಕಳೆದ ತಿಂಗಳಿಂದ ಹಂದಿಗೊಂದಿ ಅರಣ್ಯದಲ್ಲಿ ಬೀಡು ಬಿಟ್ಟಿರುವ ಎರಡು, ಮೂರು, ಒಂಟಿ ಆನೆಗಳು ಅರಣ್ಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಟ ನಡೆಸುತ್ತಾ ರೈತರ ಜಮೀನನಲ್ಲಿ ಬೆಳೆದ ತೆಂಗು, ಮಾವಿನ ಮರ, ತೋಟದ ಬೆಳೆ, ಬೋರ್ವೆಲ್ ನಾಶಪಡಿಸುತ್ತಿದೆ.
ಹೆಚ್ಚಾಗಿ ತೆಂಗು ಮರಗಳನ್ನೇ ನೆಲಕಚ್ಚಿಸುತ್ತಿದೆ. ಕಷ್ಟಪಟ್ಟು ಜೀವನಕ್ಕಾಗಿ ಮಾವು, ತೆಂಗು, ಪಪ್ಪಾಯಿ ತೋಟ ಬೆಳೆಸಲಾಗಿತ್ತು ಆನೆಗಳು ಕ್ಷಣಾರ್ಧದಲ್ಲಿ ಇಷ್ಟು ವರ್ಷ ಬೆಳೆಸಿದ ಮರಗಳನ್ನು ನೆಲಕ್ಕುರುಳಿಸಿ ನಾಶ ಮಾಡಿವೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಭೇಟಿ ನೀಡಿ ಪರಿಶೀಲಿಸಿದರು.