ಬಿಡದಿ ಸಮೀಪದ ಕಾಕರಾಮನಹಳ್ಳಿಯಲ್ಲಿ ವಿಜಯಕುಮಾರ್ ಅವರ ಬದನೆ ಹಾಗೂ ಮೆಣಸಿನಕಾಯಿ ಬೆಳೆ ನಾಶವಾಗಿರುವುದು.
ಬಿಡದಿ: ಸಮೀಪದ ಕಾಕರಾಮನಹಳ್ಳಿಯಲ್ಲಿ ಜಮೀನು ವಿವಾದದಿಂದಾಗಿ ದಾಯಾದಿಗಳು ಬೆಳೆ ನಾಶ ಮಾಡಿದ್ದಾರೆ.
ಗ್ರಾಮದ ವಿಜಯಕುಮಾರ್ ಅವರು 1 ಎಕರೆ ಬದನೆ, 1 ಎಕರೆ ಮೆಣಸಿನಕಾಯಿ ಬೆಳೆದಿದ್ದು, ವಿಜಯಕುಮಾರ್ ಅವರ ಚಿಕ್ಕಪ್ಪ ಪುಟ್ಟಸ್ವಾಮಿ ಹಾಗೂ ದೊಡ್ಡಪ್ಪನ ಮಗ ಗಂಗಾಧರ್ ಇಬ್ಬರೂ ಸೇರಿ ಮಂಗಳವಾರ ರಾತ್ರಿ ಏಕಾಏಕಿ ತೋಟಕ್ಕೆ ನುಗ್ಗಿ ಬದನೆ ಹಾಗೂ ಮೆಣಸಿನಕಾಯಿ ಬೆಳೆ ನಾಶಮಾಡಿದ್ದಾರೆ ಎನ್ನಲಾಗಿದೆ.
ವಿಜಯ್ ಅವರ ತಾತ ಭೈರಪ್ಪ ಅವರ ಹೆಸರಿನಲ್ಲಿ ಈ ಜಮೀನಿದ್ದು, ವಿಜಯ್ ಅವರ ತಂದೆ ರಾಜಣ್ಣ ಸಾವಿನ ಬಳಿಕ
ಪುಟ್ಟಸ್ವಾಮಿ ಹಾಗೂ ಗಂಗಾಧರ್ ಜಮೀನು ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.