ಕೂನೂರು ದಾಖ್ಲೆ ಬೆಟ್ಟೇಗೌಡನದೊಡ್ಡಿತಲ್ಲಿ ಕಾಡಾನೆ ದಾಳಿಯಿಂದ ತೆಂಗು ನಾಶವಾಗಿರುವುದು.
ಕನಕಪುರ: ತಾಲೂಕಿನ ಕಸಬಾ ಹೋಬಳಿ ಕೂನೂರು ದಾಖ್ಲೆ ಬೆಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಕಾಡಾನೆ ದಾಳಿ ಮಾಡಿದೆ.
ಗ್ರಾಮದ ಪುಟ್ಟಸೋಮಾರಾಧ್ಯ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆ ತೆಂಗು, ಬಾಳೆ, ಮಾವಿನ ಮರಗಳನ್ನು ನಾಶ ಮಾಡಿದೆ.
ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಆನೆ ನಾಶ ಮಾಡಿರುವುದಲ್ಲದೇ, ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾಡಾನೆ ಸೆರೆಹಿಡಿದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.