ಬಾನಂದೂರು ಗ್ರಾಮದಲ್ಲಿ ಆನೆಗಳ ದಾಳಿಗೆ ಬೆಳೆ ನಾಶವಾಗಿದೆ. 
ಬೆಂಗಳೂರು ದಕ್ಷಿಣ

ಆನೆ ದಾಳಿಗೆ ಬೆಳೆ ನಾಶ

ರೇಷ್ಮೆ ನಗರ ಡೆಸ್ಕ್
ಬಿಡದಿ: ಬಾನಂದೂರು ಗ್ರಾಮದ ರೈತ ನಂಜುಂಡಿ ಹಾಗೂ ಇತರ ಮೂವರು ರೈತರ ಭತ್ತ, ರಾಗಿ, ಜೋಳ, ತೆಂಗಿನ ಮರ ಸೇರಿದಂತೆ ಮೋಟರ್​ ಪಂಪ್​ ಪರಿಕರಗಳನ್ನು ಆನೆಗಳು ದಾಳಿ ಮಾಡಿ ನಾಶ ಪಡಿಸಿವೆ.
ತೆಂಗಿನ ಕಲ್ಲು ಅರಣ್ಯ ಪ್ರದೇಶದಿಂದ ಬಂದಿದ್ದ ಎರಡು ಆನೆಗಳು ತೆಂಗಿನ ಮರಗಳು ಹಾಗೂ ಕಾಟಾವು ಮಾಡಿದ್ದ ಭತ್ತ, ರಾಗಿಯನ್ನು ತಿಂದು, ತುಳಿದು ನಾಶ ಮಾಡಿವೆ.