ಕನಕಪುರದ ಕ್ಷಮನಿ ಕ್ರೆಡಿಟ್​ ಕೋ&ಆಪರೇಟಿವ್​ ಸೊಸೈಟಿ ಪ್ರಾರಂಭೊತ್ಸವದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಸಂದ ಅಧ್ಯಕ್ಷ ಸೀತಾರಾಮೇಗೌಡ, ಉಪಾಧ್ಯಕ್ಷ ಶಿವರಾಜು, ನಿರ್ದೇಶಕರಾದ ಕೆಂಪರಾಜು, ಪದ್ಮಾ, ಪುಟ್ಟಸ್ವಾಮಿ, ವೆಂಕಟೇಶ್​, ನಾರಾಯಣರಾವ್​, ಸುರೇಶ್​ ಇದ್ದರು. 
ಬೆಂಗಳೂರು ದಕ್ಷಿಣ

ಸಹಕಾರ ಬ್ಯಾಂಕ್​ಗಳು ಜನರ ಜೀವನಾಡಿ

ಕನಕಪುರ: ಸಹಕಾರ ಕ್ಷೇತ್ರ ಗ್ರಾಮೀಣ ಜನರ ಜೀವನಾಡಿ. ಈ ಕ್ಷೇತ್ರದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಕಷ್ಟು ಅವಕಾಶಗಳಿವೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.
ನಗರದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಕ್ಷಮನಿ ಕ್ರೆಡಿಟ್​ ಕೋ&ಆಪರೇಟಿವ್​ ಸೊಸೈಟಿ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಂಟನೆಯ ಮೂಲಕ ಹಲವು ಸಾಧನೆ ಮಾಡಬಹುದು. ಸಹಕಾರ ಕ್ಷೇತ್ರದಲ್ಲಿ ಕೆಲವೊಮ್ಮೆ ಬಿನ್ನಭಿಪ್ರಾಯಗಳು ಕೇಳಿ ಬರುತ್ತವೆ. ಅಡಳಿತ ಮಂಡಳಿಯವರು ಉತ್ತಮ ಸೇವೆ ಸಲ್ಲಿಸಬೇಕು. ಸಹಕಾರ ಕ್ಷೇತ್ರ ನಮ್ಮ ನಾಡಿನಲ್ಲಿ ವಿಶಾಲ ವ್ಯಾಪ್ತಿ ಹೊಂದಿವೆ ಎಂದರು.
ಇತ್ತೀಚೆಗೆ ಸಹಕಾರ ಸಂ, ಸಿಶಕ್ತಿ ಸಂಗಳು ಬ್ಯಾಂಕುಗಳಿಗೆ ಸರಿಸಮನಾಗಿ ವ್ಯವಹಾರ ನಡೆಸುತ್ತಿವೆ. ಸರ್ಕಾರ ಮತ್ತು ಸಂಟನೆಯಿಂದ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯ. ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ, ಪಿಗ್ಮಿ ಸೇರಿ ಅನೇಕ ಸಾಲ, ಸೌಲಭ್ಯ ನೀಡುವ ಮೂಲಕ ಜನರಿಗೆ ಉತ್ತಮ ಸೇವೆ ದೊರೆಯಲಿ ಎಂದರು.