ಮಾಗಡಿಯಲ್ಲಿ ವಕೀಲರ ಸಂಘದಿಂದ ಸಚಿವ ಎಚ್.ಸಿ.ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ರಾಜಯ್ಯ, ಕಾರ್ಯದರ್ಶಿ ಅನಿಲ್ ಕುವಾರ್, ವಕೀಲರಾದ ದೇವರಾಜು, ರಾಜಯ್ಯ, ಪಾಪಣ್ಣ, ಸಹನಾ, ವಿಜಯಕುವಾರ್ ಇದ್ದರು. Construction of a new court complex spanning 4 acres
ಬೆಂಗಳೂರು ದಕ್ಷಿಣ

4 ಎಕರೆ ವಿಸ್ತೀರ್ಣದಲ್ಲಿ ನೂತನ ಕೋರ್ಟ್ ನಿರ್ಮಾಣ

ಸಚಿವ ಎಚ್.ಸಿ.ಬಾಲಕೃಷ್ಣ ಭರವಸೆ - ಮಾಗಡಿಯಲ್ಲಿ ಲಾ ಯುನಿವರ್ಸಿಟಿ ಆರಂಭಿಸಲು ಸಿಎಂಗೆ ಮನವಿ

ಮಾಗಡಿ: ಕನಕಪುರದಲ್ಲಿರುವ ನ್ಯಾಯಾಲಯ ಮಾದರಿಯಲ್ಲೇ ಪಟ್ಟಣದ ಸಮೀಪವೇ 4 ಎಕರೆ ವಿಸ್ತೀರ್ಣದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ವಕೀಲರ ಕಚೇರಿಯಲ್ಲಿ ಬುಧವಾರ ಸನ್ಮಾನ ಸ್ವೀಕರಿ ಮಾತನಾಡಿ, ಸೋಲೂರು ಹೋಬಳಿ ನ್ಯಾಯಾಂಗ ವ್ಯಾಪ್ತಿಯನ್ನು ವಾಗಡಿ ನ್ಯಾಯಾಲಯಕ್ಕೆ ಸೇರಿಸಲು, ವಾಗಡಿಯಲ್ಲಿ ಲಾ ಯುನಿವರ್ಸಿಟಿ ಆರಂಭಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಮಯ ನಿಗದಿ ಮಾಡಲಾಗುತ್ತಿದ್ದು, ವಕೀಲರ ನಿಯೋಗ ಬಂದರೆ ಅನುಕೂಲವಾಗಲಿದೆ ಎಂದರು.

ಪ್ರಸ್ತುತ ನ್ಯಾಯಾಲಯ ಕಟ್ಟಡಕ್ಕೆ ಪುರಸಭೆಯಿಂದ ನಿವೇಶನ ನೀಡಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಜಾಗ ಗುರುತಿಸಿ, 5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಕಿರಿದಾದ ಕಾರಣ ಪಟ್ಟಣ ಸಮೀಪ ನ್ಯಾಯಾಲಯ ಕಟ್ಟಡ ನಿರ್ಮಿಸಲು ಜಾಗ ಗುರುತಿಸಲಾಗಿದೆ ಎಂದರು.

35 ವರ್ಷ ಶಾಸಕ ವೃತ್ತಿಯಲ್ಲಿ ಸಂಸಾರಕ್ಕಿಂತ ಸಾರ್ವಜನಿಕ ಸೇವೆಗೆ ಹೆಚ್ಚು ಸಮಯ ನೀಡಿದ್ದೇನೆ. ಬೆಳಗೆದ್ರೆ ಜನರ ಮಧ್ಯೆ ಇದ್ದು ಕೆಲಸ ವಾಡಿದರು ಜನರಿಂದ ಬೈಸಿಕೊಂಡಿದ್ದೇನೆ. 2018ರಲ್ಲಿ ಸೋಲಿಸಿದರು, 2023ರಲ್ಲಿ ಗೆಲ್ಲಿಸಿದರು. ಬೇರೆ ಯಾರಾದರೂ ಆಗಿದ್ದರೆ 52 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರೆ ರಾಜಕೀಯ ವಾಡುತ್ತಿರಲಿಲ್ಲ ಎಂದರು.

ವಕೀಲರ ಸಂದ ಅಧ್ಯಕ್ಷ ಸುರೇಶ್ ವಾತನಾಡಿ, ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದ್ದು, ಆದರೆ ನ್ಯಾಯಾಲಯ ಪ್ರಕರಣಗಳು ಮಾಗಡಿಯಲ್ಲೇ ಉಳಿಯುವಂತೆ ಸಿಎಂಗೆ ಮನವಿ ಸಲ್ಲಿಸಲು ಸಚಿವರ ಜತೆ ನಿಯೋಗ ತೆರಳಲಾಗುವುದು. ವಕೀಲರ ಅಸೋಸಿಯೇಷನ್ ಸಭಾಂಗಣ ಚಿಕ್ಕದಾಗಿದ್ದು, ಹೊಸ ಕಟ್ಟಡ ನಿರ್ವಾಣಕ್ಕೆ ಅನುದಾನ ಬಂದಿದ್ದು, ಶ್ರೀ ಚಾಲನೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ವಕೀಲ ಹೀರಣ್ಣಯ್ಯ ವಾತನಾಡಿದರು.

ವಕೀಲರಾದ ಚಂದ್ರಶೇಖರ್, ಲಕ್ಷ್ಮೀ ಪ್ರಸಾದ್, ದೇವರಾಜು, ರಾಮಚಂದ್ರ, ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್. ಮಂಜುನಾಥ್, ಬ್ರಹ್ಮಾನಂದ, ಮಹೇಶ್, ಹೇಮವಾಲಿನಿ, ಲೋಕೋಪಯೋಗಿ ಇಲಾಖೆ ಎಇಇ ಶಿವಕುವಾರ್ ಇತರರು ಇದ್ದರು.