ಸಂಸದ ಡಾ.ಸಿ.ಎನ್. ಮಂಜುನಾಥ್ ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದರು.
- ಮಸೂದೆ ಗೆಲುವು ಎಲ್ಲರ ಗೆಲುವಾಗುತಿತ್ತು
- ಕಾಂಗ್ರೆಸ್ ನಿಲುವು ದುರದೃಷ್ಟಾಕರ
- ಮೀಸಲು ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು
ರಾಮನಗರ: ಮಹಿಳಾ ಮೀಸಲಾತಿ ಕಾಯ್ದೆ ತಿದ್ದುಪಡಿ ಗೆದಿದ್ದರೆ ಇದರ ಶ್ರೇಯಸ್ಸು ಎಲ್ಲರಿಗೂ ಸಲ್ಲುತ್ತಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಇದಕ್ಕೆ ವಿರೋಧ ಮಾಡಿದ್ದು ದುರದೃಷ್ಟಕರ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರು ಇದ್ದಾರೆ. ಇವರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಎನ್ನುವ ಹೋರಾಟ ನೆನ್ನೆ ಮೊನ್ನೆಯದಲ್ಲಿ. ದೇಶದಲ್ಲಿ ಮೊದಲ ಬಾರಿಗೆ ಶೇ.33ರಷ್ಟು ಮೀಸಲಾತಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ತಂದ ಕೀರ್ತಿ ಎಚ್.ಡಿ.ದೇವೇಗೌಡರದ್ದು. ನಂತರ ಇವರು ಪ್ರಧಾನಿ ಆದಾಗ ದೇಶ ವ್ಯಾಪಿ ಇದನ್ನು ತರುವ ಪ್ರಯತ್ನಕ್ಕೆ ಸೋಲಾಯಿತು. ವಾಜಪೇಯಿ ಅವರೂ ಸಹ ಮೂರು ಬಾರಿ ವಿದೇಯಕ ಮಂಡಿಸಿ ಸೋಲು ಕಂಡರು. ಈಗ ನರೇಂದ್ರ ಮೋದಿ ಅವರು 2023ರಲ್ಲಿ ಶೇ.33ರಷ್ಟು ಮೀಸಲಾತಿಗೆ ಬಿಲ್‌ಗೆ ಬೆಂಬಲ ಪಡೆದರು.
ಅಂದು ಒಪ್ಪಿಗೆ ನೀಡಿದ್ದ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಈಗ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ. ಕ್ಷೇತ್ರ ಪುನರ್ ವಿಂಗಡಣೆ ನೆಪ ಮುಂದಿಟ್ಟುಕೊAಡು, ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ, ಬಿಜೆಪಿ ತನಗೆ ಲಾಭ ಮಾಡಿಕೊಳ್ಳಲು ಕ್ಷೇತ್ರ ಹೆಚ್ಚಳ ಮಾಡುತ್ತಿದೆ ಎನ್ನುವ ಸುಳ್ಳು ಕತೆಯನ್ನು ಮುಂದಿಟ್ಟುಕೊAಡು ಬಿಲ್‌ಗೆ ಸೋಲಾಗುವಂತೆ ಮಾಡಲಾಗಿದೆ.
ಆದರೆ 1971ರಲ್ಲಿ 54 ಕೋಟಿ ಜನ ಸಂಖ್ಯೆಗೆ ಅನುಗುಣವಾಗಿ 543 ಕ್ಷೇತ್ರಗಳನ್ನು ಮಾಡಲಾಗಿತ್ತು. ಈಗ ನಮ್ಮ ದೇಶದ ಜನ ಸಂಖ್ಯೆ 140 ಕೋಟಿ ದಾಟಿದೆ. ಈ ಹಿನ್ನೆಲೆಯಲ್ಲಿ ಜನರ ಒಳಿತಿಗಾಗಿ ಸ್ಥಾನಗಳ ಸಂಖ್ಯೆ ಹೆಚ್ಚಳ ಸಹ ಅಗತ್ಯವಿದೆ. ಇದರಿಂದ ದಕ್ಷಿಣದ ರಾಜ್ಯಗಳಿಗೆ ಸುಮಾರು 119 ಸೀಟುಗಳು ಹೆಚ್ಚಳವಾಗುತಿತ್ತು. ಆದರೆ ಇದಕ್ಕೂ ಸಹ ವಿರೋಧ ವ್ಯಕ್ತಪಡಿಸಲಾಗಿದೆ. ಮಹಿಳೆಯರಿಗೆ ಮೀಸಲು ನೀಡುವುದು ಹಾಗೂ ಕ್ಷೇತ್ರ ಪುರ್ನ ವಿಗಂಡಣೆಗೆ ವಿರೋಧ ಪಕ್ಷ, ವಿರೋಧ ಮಾಡಲೇಬೇಕು ಎನ್ನುವ ಕಾರಣ ವಿರೋಧಿಸಿ, ರಾಜಕೀಯ ಬಣ್ಣ ನೀಡಿರುವುದು ಬೇಸರದ ಸಂಗತಿ ಎಂದರು.
ಮಹಿಳಾ ಮೀಸಲಾತಿ ಎಂಬ ಮಹತ್ವದ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು, ವಿಶೇಷವಾಗಿ ಇಂಡಿ ಒಕ್ಕೂಟ, ತೋರಿಸಿರುವ ನಿರ್ಲಕ್ಷö್ಯ ಮತ್ತು ದ್ವಂದ್ವ ನಿಲುವನ್ನು ತೀವ್ರವಾಗಿ ಖಂಡಿಸಿದ ಅವರು, ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಮಾತಿನ ಮಟ್ಟಕ್ಕೆ ಸೀಮಿತಗೊಂಡಿರುವ ಈ ರಾಜಕೀಯ ನಡೆ, ನಿಜವಾದ ಅರ್ಥದಲ್ಲಿ ನಾರಿ ಶಕ್ತಿಗೆ ಮಾಡಿದ ಮಹಾ ಅನ್ಯಾಯ ಮತ್ತು ಅವಮಾನವೆಂದು ಎಂದರು.
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ವಕ್ತಾರರಾದ ಅಶ್ವಿನಿ ಶಂಕರ್ ಮಾತನಾಡಿ, ಮಹಿಳಾ ಮೀಸಲು ವಿಧೇಯಕಕ್ಕೆ ಸೋಲಾಗಿರುವುದು ಕಾಂಗ್ರೆಸ್ ಮತ್ತು ಅದರ ಮಿತ್ರ ಒಕ್ಕೂಟದ ಮಹಿಳಾ ವಿರೋಧಿ ಮಾನಸೀಕತೆಯನ್ನು ಬಹಿರಂಗ ಪಡಿಸಿದೆ. ಬಸವಣ್ಣ, ಅಂಬೇಡ್ಕರ್ ಆದಿಯಾಗಿ ಎಲ್ಲರೂ ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಾನ ಮಾನ ನೀಡುವ ಸಂಬAಧ ಒಲವು ಹೊಂದಿದ್ದರು. ಆದರೆ ನೆಹರೂ, ಇಂದಿರಾ, ರಾಜೀವ್ ಗಾಂಧಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ 400ಕ್ಕೂ ಹೆಚ್ಚು ಸಂಖ್ಯಾಬಲ ಹೊಂದಿದ್ದರೂ, ಮಹಿಳೆಯರಿಗೆ ಮೀಸಲಾತಿಯನ್ನು ತರುವಲ್ಲಿ ವಿಫಲರಾಗಿದ್ದಾರೆ. ಈಗ ಮತ್ತೆ ಮಹಿಳಾ ಮೀಸಲಾತಿ ತಿದ್ದುಪಡಿ ಬಿಲ್‌ಗೆ ವಿರೋಧ ವ್ಯಕ್ತಪಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಟಿಯಲ್ಲಿ ಜಿಲ್ಲೆ ಬಿಜೆಪಿ ಅಧ್ಯಕ್ಷ ಆನಂದ್ ಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಪವಿತ್ರ, ಪದ್ಮನಾಭ್, ಜಗನ್ನಾಥ್, ಕಾಳಯ್ಯ, ಚೇತನ್ ಮುಂತಾದವರು ಇದ್ದರು.
ಖರ್ಗೆ ಅವರು ಅನುಭವಿ ಮತ್ತು ಮುತ್ಸದಿ ರಾಜಕಾರಣಿ. ಅವರಿಂದ ಪ್ರಧಾನಿ ಅವರ ಬಗ್ಗೆ ಇಂತಹ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಅವರು ಮಾತುಗಳು ಆದರ್ಶವಾಗಿ ಇರಬೇಕಿತ್ತು.
ಡಾ.ಸಿ.ಎನ್.ಮಂಜುನಾಥ್,
ಸಂಸದರು