ಚನ್ನಪಟ್ಟಣದ ಕೋಟೆ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದೆ ಜಯಲಕ್ಷಿ$್ಮ ನಂಜಪ್ಪ ಅವರು ನಾಟಕದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಕಲಾವಿದರಾದ ಪದ್ಮಾವತಿ ವೆಂಕಟಾಚಲ, ಎ.ವಿ.ಚಂದ್ರಿಕಾ ಗಿರೀಶ್​, ರಾ ರಾಜೇಶ್​ಸಿಂಗ್​, ಲಕ್ಷಿ$್ಮನಾಯ್ಡು, ಮನ್ಮಜಾ ನಾಗೇಶ್​, ಭಾರತಿ ಮಹೇಶ್​, ವಸಂತ ವೆಂಕಟೇಗೌಡ, ಸುಶೀಲ ಅಪ್ಪಾಜಿ, ವ್ಯವಸ್ಥಾಪಕರಾದ ವಿ.ಟಿ.ರಮೇಶ್​, ಕರಿಯಪ್ಪ, ವೆಂಕಟಾಲಯ್ಯ, ಬಿ.ಎನ್​.ಕಾಡಯ್ಯ ಇದ್ದರು. 
ಬೆಂಗಳೂರು ದಕ್ಷಿಣ

8ರಂದು ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ

ಚನ್ನಪಟ್ಟಣ: ವಿಶ್ವ ಮಹಿಳಾ ದಿನದ ಪ್ರಯುಕ್ತ ಮಾ.8ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಶ್ರೀಅರವಿಂದವಲ್ಲಿ ಸಾಂಸತಿಕ ಕಲಾ ಟ್ರಸ್ಟ್​ ಮತ್ತು ಭಾರತ ವಿಕಾಸ ಪರಿಷದ್​ ಸಹಯೋಗದೊಂದಿಗೆ ಮಹಿಳೆಯರೇ ಅಭಿನಯಿಸುತ್ತಿರುವ "ಸಂಪೂರ್ಣ ರಾಮಾಯಣ' ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಲಾವಿದೆ ಜಯಲಕ್ಷಿ$್ಮ ನಂಜಪ್ಪ ಹೇಳಿದರು.
ನಗರದ ಕೋಟೆಯ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಾಟಕದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೊಲ್ಲಾಪುರದಮ್ಮ ದೇವಸ್ಥಾನ ಆವರಣದಲ್ಲಿನ ಡಾ.ರಾಜ್​ಕುಮಾರ್​ ಬಯಲು ರಂಗ ಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಆರ್​.ಲೋಕೇಶ್ವರ್​ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಇದ್ದು, ಕಲಾಭಿಮಾನಿಗಳು, ಕಲಾಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೋತ್ಸಾಹಿಸಬೇಕು ಎಂದು ಕೋರಿದರು.
ನಾಟಕ ಪ್ರದರ್ಶನಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್​ ಚಾಲನೆ ನೀಡಲಿದ್ದು, ಸಂಸದ ಡಾ.ಮಂಜುನಾಥ್​ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯ ಬಿ.ಎಂ.ನಾಗೇಶ್​, ತಹಸೀಲ್ದಾರ್​ ಬಿ.ಎನ್​.ಗಿರೀಶ್​, ಭಾವಿಪ ಅಧ್ಯ ಡಿ.ಪಿ.ಪುಟ್ಟಸ್ವಾಮಿಗೌಡ, ಕಕಜವೇ ರಾಜ್ಯಾಧ್ಯ ರಮೇಶ್​ಗೌಡ, ಪುಣ್ಯ ಆಸ್ಪತ್ರೆಯ ಡಾ.ಎಚ್​.ಎಲ್​.ಪದ್ಮಾವತಿ, ಡಾ.ಶಿವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ನಾಟಕದ ವ್ಯವಸ್ಥಾಪಕ ಹಾಗೂ ಭಾವಿಪ ಮಾಜಿ ಅಧ್ಯ ವಸಂತಕುಮಾರ್​ ಮಾತನಾಡಿ, ಭಾವಿಪ ಸಹಯೋಗದಲ್ಲಿ ಮಹಿಳೆಯರೇ ಕಲಿತು ಈ ಹಿಂದೆ ಕುರುೇತ್ರ ಮತ್ತು ದಯ ಎಂಬ ಪೌರಾಣಿಕ ನಾಟಕವನ್ನು ಉತ್ತಮವಾಗಿ ಅಭಿನಯಿಸಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳಿಸಿದ್ದಾರೆ. ಅದೇ ರೀತಿ ಈ ಬಾರಿಯೂ ವಿಶ್ವ ಮಹಿಳಾ ದಿನದ ಪ್ರಯುಕ್ತ ಸಂಪೂರ್ಣ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಿದ್ದಾರೆ ಎಂದರು.
ಕಲಾವಿದೆ ಕೃಷ್ಣಮ್ಮಸೋಮರಾಜು ಮಾತನಾಡಿ, ಹಿರಿಯರು ಕಟ್ಟಿಕೊಟ್ಟಿರುವ ಕಲೆ ಸಂಸತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸಾರದ ಜಂಜಾಟ, ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಮಹಿಳೆರು ಕೂಡಿ ಸಂಪೂರ್ಣ ರಾಮಾಯಣ ನಾಟಕವನ್ನು ಅಭಿನಯಿಸುತ್ತಿದ್ದೇವೆ ಎಂದರು. ಟ್ರಸ್ಟ್​ ಪದಾಧಿಕಾರಿಗಳು ಹಾಗೂ ಕಲಾವಿದರಾದ ಪದ್ಮಾವತಿ ವೆಂಕಟಾಚಲ, ಎ.ವಿ.ಚಂದ್ರಿಕಾ ಗಿರೀಶ್​, ರಾ ರಾಜೇಶ್​ಸಿಂಗ್​, ಲಕ್ಷಿ$್ಮನಾಯ್ಡು, ಮನ್ಮಜಾ ನಾಗೇಶ್​, ಭಾರತಿ ಮಹೇಶ್​, ವಸಂತ ವೆಂಕಟೇಗೌಡ, ಸುಶೀಲ ಅಪ್ಪಾಜಿ, ವ್ಯವಸ್ಥಾಪಕರಾದ ವಿ.ಟಿ.ರಮೇಶ್​, ಕರಿಯಪ್ಪ, ವೆಂಕಟಾಲಯ್ಯ, ಬಿ.ಎನ್​.ಕಾಡಯ್ಯ ಇದ್ದರು.