ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಕೆರೆಗೆ ಹಾರಿ ಆತ್ಮಹತ್ಯೆ

ಕನಕಪುರ: ಸಾತನೂರು ಸಮೀಪದ ಸೋರೆಕಾಯಿದೊಡ್ಡಿಯ ಕೆರೆಗೆ ಹಾರಿ ಸೂರನಹಳ್ಳಿಯ ಶಿವರಾಜು (40) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಶನಿದೇವರ ಪ್ರಾರ್ಥನೆ ಮಾಡಿ, ನನ್ನನ್ನು ನಿನ್ನ ಪಾದಕ್ಕೆ ಅರ್ಪಿಸುತ್ತಿದ್ದೇನೆ ಎಂದು ಹೇಳುತ್ತಲೇ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕೂಡಲೇ ಸಾತನೂರು ಪೊಲೀಸರಿಗೆ ಮಾಹಿತಿ ನೀಡಿ ಕೆರೆಗೆ ಬಿದ್ದ ವ್ಯಕ್ತಿಯನ್ನು ಹೊರತೆಗೆದರಾದರೂ ಅಷ್ಟರಲ್ಲಾಗಲೇ ಜೀವ ಹೋಗಿತ್ತು.
ಮೃತನ ಸಂಬಂಧಿ ಶಿವಮಾದಶೆಟ್ಟಿ ನೀಡಿದ ದೂರಿನ ಮೇರೆಗೆ ಮೃತದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.