ರಾಮನಗರದ ಅರ್ಕಾವತಿ ಬಡಾವಣೆಯಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸಸಿ ನೆಟ್ಟು, ಹಸಿರು ರಾಮನಗರ ಅಭಿಯಾನಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಡಾ.ಜಯಣ್ಣ, ಉಪಾಧ್ಯೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ವಿಜಯಕುಮಾರಿ, ಪಾರ್ವತಮ್ಮ, ಪವಿತ್ರಾ, ನಾಗಮ್ಮ ಹಾಗೂ ಇತರರು ಇದ್ದರು.
ರಾಮನಗರ: ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ಅರ್ಕಾವತಿ ಬಡಾವಣೆಯ ದ್ಯಾವರಸೇಗೌಡನದೊಡ್ಡಿ ರಸ್ತೆಯ ಬಯೋಗ್ಯಾಸ್ ಟಕದ ಬಳಿ ಶುಕ್ರವಾರ ಸಸಿ ನೆಡುವ ಮೂಲಕ "ಒಂದು ವಾರ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಹೆಚ್ಚು ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಉಳಿಸಿ ಬೆಳೆಸಬೇಕು ಎಂದರು.
ನಗರಸಭೆಯ 2026&27ನೇ ಸಾಲಿನ ಆಯ&ವ್ಯಯದಲ್ಲಿ ಪರಿಸರ ಸಂರಕ್ಷಣೆ ಒತ್ತು ನೀಡಿ ನಗರದಲ್ಲಿ 5 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ವಾಗ್ದಾನ ನೀಡಲಾಗಿತ್ತು. ಹಾಗಾಗಿ ಹಸಿರು ರಾಮನಗರ ೂಷವಾಕ್ಯದೊಡನೆ ಸಸಿ ನೆಡಲು ಸಂಕಲ್ಪ ಮಾಡಲಾಗಿದೆ. ಒಂದುವಾರ ನಗರದೆಲ್ಲೇಡೆ ಅಭಿಯಾಣ ನಡೆಯಲಿದೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ಸುಮಾರು 5 ಸಾವಿರ ಗಿಡಗಳನ್ನು ರಾಮನಗರದ ವಿವಿಧ ಬಡಾವಣೆಗಳಲ್ಲಿ ನೆಡಲು ಉದ್ದೇಶಿಸಿ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚು ಹಚ್ಚು ಪರಿಸರ ಸಂರಕ್ಷಣೆ ಕಡೆ ಗಮನ ಹರಿಸಬೇಕು. ಪರಿಸರವನ್ನು ನಾವು ಸಂರಸದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದನ್ನು ಮನಗಾಣಬೇಕು ಎಂದರು. ನಗರಸಭೆ ಉಪಾಧ್ಯೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ವಿಜಯಕುಮಾರಿ, ಪಾರ್ವತಮ್ಮ, ಪವಿತ್ರಾ, ನಾಗಮ್ಮ, ಅಭಿಯಂತರರಾದ ವಿಶ್ವನಾಥ್, ಸುಬ್ರಹ್ಮಣಿ, ನಿರ್ಮಲಾ, ಕಂದಾಯ ನಿರೀಕ್ಷಕ ಆರ್.ನಾಗರಾಜ್ ಹಾಗೂ ಇತರರು ಇದ್ದರು.
ಇಂದು ಇಡೀ ಜಗತ್ತಿನಲ್ಲಿ ಪರಿಸರ ನಾಶವಾಗುತ್ತಿರುವುದು ಅತಂಕಕಾರಿ ವಿಷಯ. ಮನುಷ್ಯ ತನ್ನ ಅನುಕೂಲಕ್ಕಾಗಿ ಪರಿಸರ ಹಾಳು ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಪ್ರಕೃತಿಯ ವಿಕೋಪಗಳು ಹೆಚ್ಚಾಗಿ ಮಾನವನಿಗೆ ಉಳಿಗಾಲವಿರುವುದಿಲ್ಲ. ಹಾಗಾಗಿ ಎಲ್ಲರೂ ಒಂದೊಂದು ಸಸಿ ನೆಟ್ಟು ಪೋಷಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.