ಮಾಗಡಿ ಶಾಸಕರ ಗೃಹಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮಾತನಾಡಿದರು. ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯ ತಟವಾಳು ಪ್ರಕಾಶ್​, ಪುರಸಭೆ ಮಾಜಿ ಸದಸ್ಯ ಶಿವಕುಮಾರ್​, ಮುಖಂಡರಾದ ರೆಹಮಾನ್​, ಬೆಳಗುಂಬ ನರಸಿಂಹಯ್ಯ ಇದ್ದರು. 
ಬೆಂಗಳೂರು ದಕ್ಷಿಣ

ದಾಖಲೆ ಸಮೇತ ಚರ್ಚೆಗೆ ಬನ್ನಿ

ಮಾಗಡಿ: ಶಾಸಕ ಬಾಲಕೃಷ್ಣ ವಿರುದ್ಧ ನಿರಾಧಾರ ಹಾಗೂ ದಿಕ್ಕುತಪ್ಪಿಸುವ ಆರೋಪ ಮಾಡುವ ಮಾಜಿ ಶಾಸಕ ಎ.ಮಂಜು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಗಡಿ ಬ್ಲಾಕ್​ ಕಾಂಗ್ರೆಸ್​ ಅಧ್ಯ ಪೂಜಾರಿಪಾಳ್ಯ ಕೃಷ್ಣಮೂರ್ತಿ ಪಂಥಾಹ್ವಾನ ನೀಡಿದರು.
ಶಾಸಕರ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 600 ಕೋಟಿ ಹಗರಣ, ಬಿಡಿಸಿಸಿ ಬ್ಯಾಂಕ್​ ಹಗರಣ ಎಂದು ಎ.ಮಂಜು ಅವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಲಿ. ಏ.25ರ ಶನಿವಾರ ಬೆಳಗ್ಗೆ 11 ಗಂಟೆಗೆ ಚಕ್ರಭಾವಿ ವಿಎಸ್ಸೆಸ್ಸೆನ್​ ಆವರಣದಲ್ಲಿ ನಾವು ಚರ್ಚೆಗೆ ವೇದಿಕೆ ಸಿದ್ಧಪಡಿಸುತ್ತೇವೆ. ಅಲ್ಲಿಗೆ ದಾಖಲೆಗಳೊಂದಿಗೆ ಬನ್ನಿ. ಒಂದು ವೇಳೆ ಸಮಯಕ್ಕೆ ಬರಲು ಸಾಧ್ಯವಾಗದಿದ್ದರೆ, ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸಿ, ಬಾಲಕೃಷ್ಣ ಅವರನ್ನೇ ಚರ್ಚೆ ಕರೆತರಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಸೋಲಿಗೆ ಎ.ಮಂಜು ಕಾರಣ
2023ರ ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ನಾನು ಯಾವತ್ತೂ ತಾಯಿಗೆ ದ್ರೋಹ ಬಗೆಯಲ್ಲ. ಮಾಗಡಿ ರಾಜಕಾರಣದ ಸ್ಥಿತಿ ಸರಿ ಇಲ್ಲ ಎಂದು ನಾನೇ ಖುದ್ದಾಗಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಎ.ಮಂಜು ಅವರ ಬಳಿ ಚರ್ಚಿಸಿದ್ದೆ. ಆದರೆ ವರಿಷ್ಠರು ನಮ್ಮ ಮಾತು ಕೇಳಲಿಲ್ಲ. ಎ.ಮಂಜು ಅವರ ಸೋಲಿಗೆ ಅವರ ನಡವಳಿಕೆಯೇ ಕಾರಣ ಎಂದರು.