kkkkkkkkkkkkkkkkkkkkkkkkkk 
ಬೆಂಗಳೂರು ದಕ್ಷಿಣ

ರಾಸುಗಳ ಜಾತ್ರೆ ಕಣ್ತುಂಬಿಕೊಳ್ಳೋಣ ಬನ್ನಿ

ಪ್ರಮುಖ ಮುಖ್ಯಾಂಶಗಳು

  • ಶುಕ್ರವಾರದಿಂದ ಮಾಗಡಿಯಲ್ಲಿ ರಂಗನಾಥಸ್ವಾಮಿ ದನಗಳ ಉತ್ಸವದ ಸಂಭ್ರಮ
  • ಚಿನ್ನ - ಬೆಳ್ಳಿ ನಾಣ್ಯಗಳ ಪ್ರಶಸ್ತಿ ಸಂಪ್ರದಾಯ ಪುನರಾರಂಭ
ಮಾಗಡಿ
ರಾಜ್ಯದ ಕೃಷಿ ಸಂಸತಿಯ ಪ್ರತಿಬಿಂಬ, ಹಳ್ಳಿಕಾರ್​ ತಳಿಯ ಹೆಮ್ಮೆ ಮತ್ತು ಭಕ್ತಿ-ಭಾವದ ಸಮ್ಮಿಲನವಾಗಿರುವ ಪುರಾಣ ಪ್ರಸಿದ್ಧ ಮಾಗಡಿಯ ಶ್ರೀ ರಂಗನಾಥಸ್ವಾಮಿರಾಸುಗಳ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ.
ಯುಗಾದಿ ಮರುದಿನದಿಂದಲೇ ಮಾಗಡಿಯ ಮಣ್ಣಿನಲ್ಲಿ ಹಳ್ಳಿಕಾರ್​ ಹೋರಿಗಳು ಅಬ್ಬರಿಸಲಿವೆ. ನಾದಸ್ವರದ ಮಧುರ ಧ್ವನಿ ಮತ್ತು ರೈತಾಪಿ ವರ್ಗದ ಸಂಭ್ರಮ ಜಾತ್ರೆಯಲ್ಲಿ ಮೇಳೈಸಲಿದೆ. 300ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿರುವ ಈ ಜಾತ್ರೆ, ಈ ಬಾರಿ ಹಳೆಯ ವೈಭವವನ್ನು ಮರುಕಳಿಸುವಂತೆ ಮಾಡಲು ಸಜ್ಜಾಗಿದೆ.

ಅಂತಾರಾಜ್ಯ ವ್ಯಾಪಾರಿಗಳ ತಾಣ

ಮಾಗಡಿ ಜಾತ್ರೆ ಎಂದರೆ ಕೇವಲ ಸ್ಥಳಿಯ ಹಬ್ಬವಲ್ಲ, ಇದು ದಣ ಭಾರತದ ಅತಿದೊಡ್ಡ ರಾಸುಗಳ ಮಾರುಕಟ್ಟೆ. ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲದೆ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಸಾವಿರಾರು ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಹಳ್ಳಿಕಾರ್​ ತಳಿಯ ಹಸುಗಳು ಮತ್ತು ಗಾಂಭೀರ್ಯದ ಹೋರಿಗಳಿಗೆ ನೆರೆ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದ್ದು, ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ.

ರಾಸುಗಳಿಗೂ ರಾಜಮರ್ಯಾದೆ!

ನಾದಸ್ವರ, ತಮಟೆ, ನಗಾರಿಗಳ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ರಾಸುಗಳಿಗೆ ಆಕರ್ಷಕವಾಗಿ ಅಲಂಕಾರ ಮಾಡಲಾಗುತ್ತದೆ. ಹೋರಿಗಳಿಗಾಗಿ ದೊಡ್ಡ ದೊಡ್ಡ ಟೆಂಟ್​ ನಿರ್ಮಿಸಲಾಗಿದ್ದು, ಝಗಮಗಿಸುವ ದೀಪಾಲಂಕಾರ ಮತ್ತು ರಾಸುಗಳು ಮಲಗಲು ವಿಶೇಷ ವಿನ್ಯಾಸದ ಹಾಸಿಗೆಗಳನ್ನು ತರಿಸುವುದು ಇಲ್ಲಿನ ವಿಶೇಷ. ಮಾಲೀಕರಿಗೆ ರಾಸುಗಳನ್ನು ಮೆರವಣಿಗೆ ಮಾಡುವುದೇ ಖುಷಿಯ ಸಂಗತಿಯಾಗಿರುತ್ತದೆ.

ಮರುಕಳಿಸಿದ ಚಿನ್ನ-ಬೆಳ್ಳಿ ನಾಣ್ಯಗಳ ಪ್ರಶಸ್ತಿ

ಮಾಗಡಿ ಜಾತ್ರೆಯ ಇತಿಹಾಸದಲ್ಲಿ "ಹಲ್ಲುಗಳ' (ಎರಡು, ಮೂರು, ನಾಲ್ಕು ಹಲ್ಲು) ಆಧಾರದ ಮೇಲೆ ಅತ್ಯುತ್ತಮ ರಾಸುಗಳನ್ನು ಆಯ್ಕೆ ಮಾಡಿ, ಅವುಗಳಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಪ್ರಶಸ್ತಿ ನೀಡುವ ಸಂಪ್ರದಾಯವಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಪ್ರಶಸ್ತಿಯ ವಿಚಾರ ಪ್ರತಿಷ್ಠೆಯಾಗಿ ಮಾರ್ಪಟ್ಟು ಗಲಾಟೆಗಳು ನಡೆದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಶಾಸಕರ ಮಹತ್ವದ ನಿರ್ಧಾರದಿಂದಾಗಿ ಈ ವರ್ಷ ರೈತರ ಉತ್ಸಾಹ ಹೆಚ್ಚಿಸಲು ಮತ್ತೆ ಪ್ರಶಸ್ತಿ ವಿತರಣೆ ೂಷಿಸಲ್ಪಟ್ಟಿದೆ. ರಾಸುಗಳ ಆಯ್ಕೆಗಾಗಿ ಯಾವುದೇ ಪಪಾತವಿಲ್ಲದೆ ಪಾರದರ್ಶಕವಾಗಿ ಸಮಿತಿ ರಚಿಸಲಾಗಿದೆ. ಹಳ್ಳಿಕಾರ್​ ರಾಸುಗಳ ಬಗ್ಗೆ ಅಪಾರ ಅನುಭವವಿರುವ ಜುಟ್ಟನಹಳ್ಳಿ ಜಯರಾಮ್​ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ ಕಾರ್ಯನಿರ್ವಹಿಸಲಿದೆ.

ರೈತರ ಹಿತರಣೆಗಾಗಿ ಸಕಲ ಸಿದ್ಧತೆ

ರೈತರಿಗೆ ಮತ್ತು ರಾಸುಗಳಿಗೆ ಯಾವುದೇ ತೊಂದರೆಯಾಗದಂತೆ ಶಾಸಕ ಎಚ್​.ಸಿ. ಬಾಲಕೃಷ್ಣ ಅವರು ಅಧಿಕಾರಿಗಳ ತುರ್ತು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲಾಖೆಯಿಂದ 8 ನೀರಿನ ಟ್ಯಾಂಕರ್​ ವ್ಯವಸ್ಥೆ ಮಾಡಲಾಗಿದೆ.
ಬಾಗೇಗೌಡ, ಕಾಂಗ್ರೆಸ್​ ಮುಖಂಡರಾದ ಶೈಲಜಾ, ಎಚ್​.ಎಂ. ಕೃಷ್ಣಮೂರ್ತಿ ಮತ್ತು ಹಳ್ಳಿಕಾರ್​ ಸಂದ ವತಿಯಿಂದ ರೈತರಿಗೆ ಉಚಿತ ಉಪಾಹಾರ ಮತ್ತು ನೀರು ವಿತರಣೆ ಮಾಡಲಾಗುತ್ತದೆ.
ರಂಗನಾಥಸ್ವಾಮಿ ದನಗಳ ಜಾತ್ರೆಗೆ ರಾಜ್ಯ&ಹೊರರಾಜ್ಯಗಳಿಂದ ರೈತರು ಬರುತ್ತಾರೆ. ಅವರಿಗೆ ಸಕಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ನಾನೇ ಖುದ್ದಾಗಿ ವ್ಯವಸ್ಥೆ ಪರಿಶೀಲಿಸಿ ರೈತರೊಂದಿಗೆ ವಿಚಾರ ವಿನಿಮಯ ಮಾಡುತ್ತೇನೆ.
> ಎಚ್​.ಸಿ. ಬಾಲಕೃಷ್ಣ ಶಾಸಕರು, ಮಾಗಡಿ
ಬೇರೆಲ್ಲೂ ಕಾಣಸಿಗದ ಸಾವಿರಾರು ಹಳ್ಳಿಕಾರ್​ ರಾಸುಗಳು ಇಲ್ಲಿಗೆ ಬರುತ್ತವೆ. ಮಾಗಡಿ ಜಾತ್ರೆಯ ವೈಭೋಗವೇ ಒಂದು ಆನಂದ. ನಿಂತುಹೋಗಿದ್ದ ಪ್ರಶಸ್ತಿ ಸಂಪ್ರದಾಯವನ್ನು ಮತ್ತೆ ಆರಂಭಿಸಿದ ಶಾಸಕರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಜುಟ್ಟನಹಳ್ಳಿ ಜಯರಾಮ್​, ಹಳ್ಳಿಕಾರ್​ ರಾಸು ಪರಿಣಿತ

ಒಂದು ವಾರಕ್ಕೆ ಸೀಮಿತ

ಮಾಗಡಿಯ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಯುಗಾದಿ ಹಬ್ಬದ ಮರುದಿನದಿಂದ ಆರಂಭಗೊಳ್ಳಲಿದೆ. ದಶಕಗಳಿಗೂ ಹಿಂದೆ ತಿಂಗಳವರೆಗೆ ನಡೆಯುತ್ತಿದ್ದ ರಾಸುಗಳ ಜಾತ್ರೆ, ಆಧುನಿಕತೆ ಹಾಗೂ ಜಾನುವಾರು ಸಂಖ್ಯೆ ಣಿಸಿದ್ದರಿಂದ ಒಂದು ವಾರಕ್ಕೆ ಸೀಮಿತಗೊಂಡಿದೆ.