ಸಿದ್ದಾರ್ಥ ನಗರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡೆದು ಹೊತ್ತಿ ಉರಿದ ತೆಂಗಿನ ಮರ. 
ಬೆಂಗಳೂರು ದಕ್ಷಿಣ

ಸಿಡಿಲಿಗೆ ಹೊತ್ತಿ ಉರಿದ ತೆಂಗಿನಮರ

ರೇಷ್ಮೆ ನಗರ ಡೆಸ್ಕ್
ಬಿಡದಿ: ಸುತ್ತಮುತ್ತ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದ್ದು, ಬಾನಂದೂರು ಗ್ರಾಮದ ಸಿದ್ದಾರ್ಥ ನಗರದಲ್ಲಿ ಸಿಡಿಲು ಬಡಿದು ತೆಂಗಿನಮರವೊಂದು ಹೊತ್ತಿ ಉರಿದಿದೆ.
ಸತತ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಿದ್ದು, ಈ ವೇಳೆ ಮಳೆ&ಗಾಳಿಗಿಂತಲೂ ಸಿಡಿಲು ಮತ್ತು ಗುಡುಗಿನ ಆರ್ಭಟವೇ ಹೆಚ್ಚಾಗಿತ್ತು. ಸಿದ್ದಾರ್ಥ ನಗರದ ತೋಟವೊಂದರಲ್ಲಿದ್ದ ತೆಂಗಿನಮರಕ್ಕೆ ನೇರವಾಗಿ ಸಿಡಿಲು ಬಡಿದಿದ್ದರಿಂದ, ಮರವು ಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿಯಲಾರಂಭಿಸಿತು. ಸಿಡಿಲಿನ ಭಯಾನಕ ಶಬ್ದ ಹಾಗೂ ಪ್ರಖರ ಬೆಳಕಿಗೆ ಗ್ರಾಮಸ್ಥರು ಒಂದು ಣ ಬೆಚ್ಚಿ ಬಿದ್ದರು.
ಕಳೆದ ವಾರವೂ ಅವಾಂತರ
ಕಳೆದ ಕೆಲವು ದಿನಗಳ ಹಿಂದೆಯೂ ಬಿಡದಿ ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದವು. ರೈಲ್ವೆ ವಿದ್ಯುತ್​ ಲೈನ್​ ಮೇಲೆ ಮರ ಬಿದ್ದು ರೈಲು ಸಂಚಾರಕ್ಕೆ ಅಡಚಣೆಯಾಗಿತ್ತು. ಹಲವೆಡೆ ಬೃಹತ್​ ಕಬ್ಬಿಣದ ಜಾಹೀರಾತು ಫಲಕಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದವು. ಇನ್ನು ಕೆಲವು ಕಡೆ ಮನೆಗಳ ಮೇಲಿನ ಸಿಮೆಂಟ್​ ಶೀಟ್​ಗಳು ಬಿರುಗಾಳಿಗೆ ಹಾರಿ ಹೋಗಿದ್ದವು. ಸದ್ಯ ಸತತವಾಗಿ ಸುರಿಯುತ್ತಿರುವ ಆಲಿಕಲ್ಲು ಹಾಗೂ ಸಿಡಿಲು ಸಹಿತ ಮಳೆಯು ಬಿಡದಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.