ಮಾಗಡಿ ಠಾಣೆಯ ಮುಖ್ಯಪೇದೆ ಬೀರಪ್ಪ
ಮಾಗಡಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ತೋರಿದ ಅಪ್ರತಿಮ ಸೇವೆಗಾಗಿ ಮಾಗಡಿ ಠಾಣೆಯ ಮುಖ್ಯಪೇದೆ ಬೀರಪ್ಪ 2026ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಮೂಲತ ದಾವಣಗೆರೆಯವರಾದ ಬೀರಪ್ಪ 2015ನೇ ಬ್ಯಾಚ್ನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಅಂದಿನಿಂದ ಇಂದಿನವರೆಗೆ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಐದು ವರ್ಷಗಳಿಂದ ಮಾಗಡಿ ಠಾಣೆಯಲ್ಲಿ ಮುಖ್ಯಪೇದೆಯಾಗಿರುವ ಇವರು ಈ ಹಿಂದೆ ತಾವರೆಕೆರೆ ಠಾಣೆಯಲ್ಲೂ ಸೇವೆ ಸಲ್ಲಿಸಿದ್ದಾರೆ.
ಜಟಿಲ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಬೆನ್ನೆಲುಬಾಗಿ ನಿಂತು, ತಾಂತ್ರಿಕ ಮತ್ತು ಪ್ರಾಯೋಗಿಕ ಾನ ಬಳಸಿ ಆರೋಪಿಗಳ ಪತ್ತೆಯಲ್ಲಿ ಬೀರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಏ.2ರಂದು ಬೆಂಗಳೂರಿನ ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀರಪ್ಪಗೆ ಪದಕ ಪ್ರದಾನ ಮಾಡಲಿದ್ದಾರೆ.