ರಾಮನಗರದ ವಾಟರ್ ಟ್ಯಾಂಕ್ ಸರ್ಕಲ್ ಬಳಿ ಕ್ಲಾಕ್ ಟವರ್ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿಪೂಜೆ ನೆರವೇರಿಸಿದರು. ಆಯುಕ್ತ ಡಾ.ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್, ಸದಸ್ಯರಾದ ಮಹಾಲ್ಮ, ಗೂಳಿಗೌಡ, ಪವಿತ್ರಾ, ಪಾರ್ವತಮ್ಮ, ನರಸಿಂಹ, ಸೋಮಶೇಖರ್, ಸಮದ್ ಇತರರು ಇದ್ದರು.
ರಾಮನಗರ: ನಗರದ ವಾಟರ್ ಟ್ಯಾಂಕ್ ಸರ್ಕಲ್ನಲ್ಲಿ ನಗರಸಭೆ ನಿಧಿಯಿಂದ 49.99 ಲಕ್ಷ ರೂ. ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಈ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಮುಗಿದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅಧ್ಯಕ್ಷರು, ಜಿಲ್ಲಾ ಕೇಂದ್ರ ರಾಮನಗರವನ್ನು ಮಾದರಿ, ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ 2026&27ನೇ ಸಾಲಿನ ಯೋಜನೆಯಡಿ ನಗರದ ಪ್ರಮುಖ ನಾಲ್ಕು ವೃತ್ತಗಳ ಸೌಂದರೀಕರಣಕ್ಕೆ ಚಾಲನೆ ನೀಡಲಾಗಿದ್ದು, ವಾಟರ್ ಟ್ಯಾಂಕ್ ಸರ್ಕಲ್ನಲ್ಲಿ ಆಕರ್ಷಕ ಕ್ಲಾಕ್ ಟವರ್ (ಗಡಿಯಾರ ಗೋಪುರ) ನಿರ್ಮಾಣಗೊಳ್ಳಲಿದೆ.
ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಹನುಮಂತಯ್ಯ ಅವರ ಪ್ರತಿಮೆ, ಸುತ್ತಲಿನ ಪ್ರದೇಶದ ಸೌಂದರೀಕರಣ, ರೈಲ್ವೆ ನಿಲ್ದಾಣ ವೃತ್ತವನ್ನು ಆಧುನಿಕ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸುವುದು ಮತ್ತು ಕೆಂಪೇಗೌಡ ವೃತ್ತವನ್ನು ನಗರದ ಪ್ರವೇಶ ದ್ವಾರದಂತೆ ಕಂಗೊಳಿಸಲಿರುವ ಸರ್ಕಲ್ಆಗಿ ಅಭಿವೃದ್ಧಿಪಡಿಸಲಾಗುವುದು ಎಂದರು. ನಗರಸಭೆ ಆಯುಕ್ತ ಡಾ.ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್, ಸದಸ್ಯರಾದ ಮಹಾಲ್ಮ ಗೂಳಿಗೌಡ, ಪವಿತ್ರಾ, ಪಾರ್ವತಮ್ಮ, ನರಸಿಂಹ, ಸೋಮಶೇಖರ್ ಇತರರು ಇದ್ದರು.
"
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ "ಐ ಲವ್ ರಾಮನಗರ' ನಾಮಫಲಕ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸ್ಥಳಿಯರಿಗೆ ಹೊಸ ಸೆಲ್ಫಿ ಪಾಯಿಂಟ್ ಆಗಿ ಗಮನ ಸೆಳೆಯಲಿದೆ.
— > ಕೆ.ಶೇಷಾದ್ರಿ ಅಧ್ಯಕ್ಷ, ನಗರಸಭೆ, ರಾಮನಗರ