ಡಿವೈಡರ್​ ಮೇಲೆ ಬೆಳೆದಿರುವ ಗಿಡ-ಗಂಟಿಗಳನ್ನು ಕತ್ತರಿಸಿದ ಸಿಬ್ಬಂದಿ (Bangalore-Mysore highway) 
ಬೆಂಗಳೂರು ದಕ್ಷಿಣ

ಬೆಂಗಳೂರು-ಮೈಸೂರು ಹೆದ್ದಾರಿ ಮಧ್ಯದ ಗಿಡ-ಗಂಟಿ ತೆರವು

ಬಿಡದಿ: ಬೆಂಗಳೂರು-ಮೈಸೂರು ಹೆದ್ದಾರಿಯ(bangalore-mysore highway) ಡಿವೈಡರ್​ಗಳಲ್ಲಿ ಬೆಳೆದಿರುವ ಗಿಡ&ಗಂಟಿ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದು, ರಸ್ತೆಯನ್ನು ಆಕ್ರಮಿಸಿದ್ದ ಮುಳ್ಳಿನ ಪೊದೆಗಳನ್ನು ಶುಕ್ರವಾರ ಪ್ರಾಧಿಕಾರದ ಸಿಬ್ಬಂದಿ ಕಟಾವು ಮಾಡಿದರು.
ಹೌದು! ಸುಮಾರು 2 ಕಿ.ಮೀ. ದೂರದವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗಿದ್ದು, ಕಾಡುಮನೆ ಕ್ರಾಸ್​ನಿಂದ ಹೆಗ್ಗಡಗೆರೆ ಕ್ರಾಸ್​ವರೆಗೆ ಡಿವೈಡರ್​ ಮೇಲೆ ಗಿಡ ಗಂಟಿಗಳು ಬೆಳೆದು ರಸ್ತೆಗೆ ಚಾಚಿಕೊಂಡಿದ್ದವು. ಗಿಡಗಳ ಜತೆಗೆ ಹುಲ್ಲು ಸಹ ಬೆಳೆದುಕೊಂಡು ಎದುರಿನ ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೆದ್ದಾರಿಯ ತಿರುವಿನಲ್ಲಿ ವಾಹನ ಸವಾರರು ತಿರುವು ಪಡೆಯುವಾಗ ಎದುರು ಬರುವ ವಾಹನಗಳು ಕಾಣದೆ ಹರಸಾಹಸ ಪಡುತ್ತಿದ್ದರು, ಕೆಲವೊಮ್ಮೆ ಅಪಘಾತಗಳೂ ಸಂಭವಿಸಿದ್ದವು.
ಈ ಬಗ್ಗೆ ಅ.24ರಂದು ವಿಜಯವಾಣಿ ಪತ್ರಿಕೆಯಲ್ಲಿ ಹೆದ್ದಾರಿ ಆವರಿಸಿದ ಗಿಡ&ಗಂಟಿ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಡಿವೈಡರ್​ ಮೇಲೆ ಬೆಳೆದಿರುವ ಗಿಡ&ಗಂಟಿಗಳನ್ನು ಕತ್ತರಿಸಿ, ತೆರವುಗೊಳಿಸಲು ಕ್ರಮವಹಿಸಿದ್ದಾರೆ. ಪ್ರಾಧಿಕಾರದ ಇಂಜಿನಿಯರ್​ ಪ್ರಕಾಶ್​ ಅವರ ಸೂಚನೆಯಂತೆ ಸದ್ಯ ಹೆಗ್ಗಡಗೆರೆ ಕ್ರಾಸ್​ನಿಂದ ಗಿಡಗಳನ್ನು ಕತ್ತರಿಸಲಾಗುತ್ತಿದ್ದು, ವಾಹನಗಳ ಸವಾರರು ಕೊಂಚ ನಿರಾಳರಾಗುತ್ತಿದ್ದಾರೆ.