ಮಾಗಡಿ&ಗುಡೇಮಾರನಹಳ್ಳಿ ಮುಖ್ಯ ರಸ್ತೆಯ ಪಣ್ಣಯ್ಯನ ಪಾಳ್ಯದ ಸಮೀಪ ನೆಲಮಂಗಲದಿಂದ ಮಾಗಡಿ ಕಡೆಗೆ ಹೋಗುತ್ತಿದ ಕಾರು ಬೆಂಕಿಗೆ ಆಹುತಿಯಾಗಿರುವುದು. 
ಬೆಂಗಳೂರು ದಕ್ಷಿಣ

ಬೆಂಕಿಗೆ ಆಹುತಿಯಾದ ಕಾರು

ರೇಷ್ಮೆ ನಗರ ಡೆಸ್ಕ್
ಮಾಗಡಿ: ಮಾಗಡಿ&ಗುಡೇಮಾರನಹಳ್ಳಿ ಮುಖ್ಯ ರಸ್ತೆಯ ಪಣ್ಣಯ್ಯನ ಪಾಳ್ಯದ ಸಮೀಪ ನೆಲಮಂಗಲದಿಂದ ಮಾಗಡಿ ಕಡೆಗೆ ಹೋಗುತ್ತಿದ ಕಾರು ಬೆಂಕಿಗೆ ಆಹುತಿಯಾಗಿದೆ.
ಕಾರಿನಲ್ಲಿ ಇದ್ದವರು ಹೊರಗೆ ಬರುತ್ತಿದ್ದಂತೆ ಕಾರಿನ ತುಂಬಾ ಬೆಂಕಿ ಆವರಿಸಿದ್ದು, ಸ್ಥಳಕ್ಕೆ ಆಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದರು. ಕಾರು ಬಹುತೇಕ ಸುಟ್ಟು ಹೋಗಿದ್ದು, ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರಿನ ಎಸಿಯಲ್ಲಿನ ಸಮಸ್ಯೆ ಉಂಟಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.