ಕುದೂರು ಹೋಬಳಿಯ ಮರೂರು ಹ್ಯಾಂಡ್​ ಪೋಸ್ಟ್​ನ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ಕಾರು ಬೆಂಕಿಗೆ ಆಹುತಿಯಾಗಿರುವುದು. 
ಬೆಂಗಳೂರು ದಕ್ಷಿಣ

ಕಾರು ಬೆಂಕಿಗಾಹುತಿ

ರೇಷ್ಮೆ ನಗರ ಡೆಸ್ಕ್
ಕುದೂರು: ಬೆಂಗಳೂರು&ಮಂಗಳೂರು ರಾಷ್ಟ್ರೀಯ ಹೆದ್ದಾರಿ&75ರ ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಬುಧವಾರ ರಾತ್ರಿ ಕಾರೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕುಣಿಗಲ್​ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದವರು ಸ್ಥಳಿಯರ ಸಹಾಯದಿಂದ ಹೊರಬಂದಿದ್ದಾರೆ. ಅಷ್ಟರಲ್ಲಿ ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದು ಬೆಂಕಿ ನಂದಿಸಿತು. ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.