ಕನಕಪುರದ ಸಾತನೂರು ರಸ್ತೆ ಬಳೆಬಸಪ್ಪನದೊಡ್ಡಿ ಗೇಟ್​ ಬಳಿ ಕಾರು ಮತ್ತು ಲಾರಿ ಅಪಘಾತದಲ್ಲಿ ಕಾರು ಜಖಂಗೊಂಡಿರುವುದು.  
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಕಾರು ಚಾಲಕ ಸಾವು

ಕನಕಪುರ: ತಾಲೂಕಿನ ಸಾತನೂರು ರಸ್ತೆ ತೋಟಹಳ್ಳಿ ಗೇಟ್​ ಸಮೀಪದ ಬಾಳೆಬಸಪ್ಪನದೊಡ್ಡಿ ಬಳಿ ಬುಧವಾರ ಕಾರು ಮತ್ತು ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೆಂಗಳೂರಿನ ಕೆ.ಆರ್​.ಪುರಂನ ಅರುಣ್​ (45) ಮೃತ. ಅರುಣ್​ ಅವರು ಸಾತನೂರು ಕಡೆಗೆ ಹೋಗುತ್ತಿದ್ದಾಗ ಲಾರಿ ಎದುರಿಗೆ ಬಂದಿದೆ ಎನ್ನಲಾಗಿದ್ದು, ಮರಣೋತ್ತರ ಪರೀೆಗಾಗಿ ಮೃತದೇಹವನ್ನು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ರಾಜೇಂದ್ರ, ಡಿವೈಎಸ್​ಪಿ ಗಿರಿ, ಸಾತನೂರು ಸಬ್​ಇನ್​ಸ್ಪೆಕ್ಟರ್​ ಸಮಂತ್​ ಭೇಟಿ ನೀಡಿ ಪರಿಶೀಲಿಸಿ, ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸಾತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.