ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಚಿರತೆ ದಾಳಿಗೆ ಕರು ಬಲಿ

ರೇಷ್ಮೆ ನಗರ ಡೆಸ್ಕ್
ಕುದೂರು: ಹೋಬಳಿಯ ಕಣ್ಣನೂರು ಗ್ರಾಮದಲ್ಲಿ ಚಿರತೆ ದಾಳಿಗೆ ಮೂರು ತಿಂಗಳ ಕರು ಬಲಿಯಾಗಿದೆ.
ಗುರುವಾರ ರಾತ್ರಿ 7&30ರ ಸಮಯದಲ್ಲಿ ಮನೆ ಮುಂದೆ ಕಟ್ಟಿದ್ದ ಕರುವನ್ನು ಚಿರತೆ ಎಳೆದುಕೂಂಡು ಹೋಗಿ ತಿಂದಿದೆ ಎಂದು ಮಾಲೀಕ ರಾಜಶೇಖರ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸುಗ್ಗನಹಳ್ಳಿ ಸಮೀಪದ ಹೊನ್ನಾಪುರದ ಶ್ರೀಧರ್​ ಅವರ ಮೇಕೆಯನ್ನು ಚಿರತೆ ಹೊತ್ತೊಯ್ದ ಟನೆ ಮಾಸುವ ಮುನ್ನವೇ ಟನೆ ನಡೆದಿದೆ. ಹೋಬಳಿಯ ಹುಲಿಕಲ್​, ಮಲ್ಲಪ್ಪನಹಳ್ಳಿ, ಬೀಚನಹಳ್ಳಿ, ಹೊನ್ನಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಹಗಲಿನ ವೇಳೆಯಲ್ಲಿಯೂ ಚಿರತೆ ಕಾಣಿಸಿಕೊಳ್ಳುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಚಿರತೆ ಹಾವಳಿ ತಡೆಗೆ ಗ್ರಾಮಗಳಲ್ಲಿ ಅರಣ್ಯ ಅಧಿಕಾರಿಗಳು ಬೋನು ಅಳವಡಿಸಿದ್ದಾರೆ.