ತಾಳಗುಪ್ಪ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಡದಿಂದಾಗಿ ಥಮೋರ್ಪ್ಯಾಕ್​ ತಯಾರಿಕಾ ಕಾರ್ಖಾನೆ ಹೊತ್ತಿ ಉರಿಯಿತು. 
ಬೆಂಗಳೂರು ದಕ್ಷಿಣ

ಹೊತ್ತಿ ಉರಿದ ಕಾರ್ಖಾನೆ

ಬಿಡದಿ: ತಾಳಗುಪ್ಪ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಡದಲ್ಲಿ ಥಮೋರ್ಪ್ಯಾಕ್​ ತಯಾರಿಕಾ ಕಾರ್ಖಾನೆ ಹೊತ್ತಿ ಉರಿಯಿತು.
ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕ್ವಾಲಿಟಿ ಥಮೋರ್ಪ್ಯಾಕ್​ ಆ್ಯಂಡ್​ ಇನ್ಸುಲೇಷನ್​ ಇಂಡಸ್ಟ್ರೀಸ್​ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆಯೇ ಹೊತ್ತಿ ಉರಿಯಿತು. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾರ್ಟ್​ ಸಕ್ಯೂರ್ಟ್​ನಿಂದ ಅವಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಆವರಿಸಿದ ದಟ್ಟ ಹೊಗೆ
ಫ್ಯಾಕ್ಟರಿಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಧಗಧಗನೆ ಹೊತ್ತಿಕೊಂಡಿತು. ದಟ್ಟ ಹೊಗೆ ಆಕಾಶದತ್ತ ಚಿಮ್ಮಿತು. ಬೆಂಕಿಯ ನರ್ತನ ಹೆಚ್ಚಾಗುತ್ತಿದಂತೆ ಅಕ್ಕ ಪಕ್ಕದ ಫ್ಯಾಕ್ಟರಿಗಳಿಗೂ ಬೆಂಕಿ ಆವರಿಸುವ ಆತಂಕ ಎದುರಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದರು. ಹಲವು ವಾಹನಗಳು ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ. ಕಾರ್ಖಾನೆಯಲ್ಲಿದ್ದ ಒಂದು ಆಟೋ, ಬೈಕ್​ ಹಾಗೂ ಬೊಲೆರೋ ವಾಹನ ಸುಟ್ಟುಕರಕಲಾಗಿವೆ.