ಸ್ಥಳಿಯರ ಮನವಿ ಪುರಸ್ಕರಿಸಿದ ಹೈಕೋರ್ಟ್ > ಪಾಸ್ ನೀಡಲು ಪ್ಲಾಜಾ ಆಡಳಿತಕ್ಕೆ ಸೂಚನೆ
ಹಾರೋಹಳ್ಳಿ: ಬೆಂಗಳೂರು ಮುಖ್ಯರಸ್ತೆಯ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಸ್ಥಳಿಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸಿಬ್ಬಂದಿಗೆ ಹೈಕೋರ್ಟ್ ಚಾಟಿ ಬೀಸಿದ್ದು, ಸ್ಥಳಿಯರಿಂದ ಶುಲ್ಕ ವಸೂಲಿಗೆ ಬ್ರೇಕ್ ಹಾಕಿ ಆದೇಶಿಸಿದೆ.
ಸೋಮನಹಳ್ಳಿ ಟೋಲ್ ಪ್ಲಾಜಾ ಸಿಬ್ಬಂದಿ ನಿಯಮ ಗಾಳಿಗೆ ತೂರಿ ಸ್ಥಳಿಯರಿಂದಲೂ ಹಣ ವಸೂಲಿ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸ್ಥಳಿಯರು ಹಲವು ಬಾರಿ ಪ್ರತಿಭಟಿಸಿದ್ದರು. ಆಗ ಟೋಲ್ ಸಿಬ್ಬಂದಿ ಆಧಾರ್ ಕಾರ್ಡ್ ತೋರಿಸಿ ಹೋಗುವಂತೆ ಸ್ಥಳಿಯರಿಗೆ ನಿಯಮ ಜಾರಿಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಹಳೇ ಚಾಳಿಯಂತೆ ಶುಲ್ಕ ವಸೂಲಿ ಮಾಡಲು ಆರಂಭಿಸಿದರು.
ಇದರಿಂದ ಅಸಮಾಧಾನಗೊಂಡ ಸ್ಥಳಿಯರು ಹಾಗೂ ರೈತಪರ, ಕನ್ನಡಪರ ಸಂಟನೆಗಳು ಟೋಲ್ ಪ್ಲಾಜಾ ಸಿಬ್ಬಂದಿಯ ದುಂಡಾವರ್ತನೆಗೆ ಕಡಿವಾಣ ಹಾಕಬೇಕು ಎಂದು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ವಾದ&ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು, ಸ್ಥಳಿಯರ ಬೇಡಿಕೆಯನ್ನು ಪುರಸ್ಕರಿದೆ. ಕೆಲಸದ ಸ್ಥಳ ಹಾಗೂ ಮನೆಗಳಿಗೆ ತೆರಳಲು ಸ್ಥಳಿಯರಿಗೆ ಸೋಮನಹಳ್ಳಿ ಟೋಲ್ ಪ್ಲಾಜಾ ಮೂಲಕ ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದ್ದಾರೆ.
ಕೋರ್ಟ್ ಆದೇಶ ಪ್ರತಿ ಪಡೆದ 30 ದಿನಗಳೊಳಗೆ ಸ್ಥಳಿಯರ ದಾಖಲೆ ಪರಿಶೀಲಿಸಿ, ಉಚಿತ ಪಾಸ್ ವಿತರಣೆ ಪೂರ್ಣಗೊಳಿಸಬೇಕು. ಅರ್ಜಿದಾರರು ಹಾಗೂ ಇತರ ಸ್ಥಳಿಯ ನಿವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಟೋಲ್ ಅಥವಾ ಬಳಕೆದಾರ ಶುಲ್ಕ ವಿಧಿಸದೆ ಉಚಿತ ಪಾಸ್ಗಳನ್ನು ನೀಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು ಪಾಸ್ ವಿತರಣೆವರೆಗೂ ಶುಲ್ಕ ವಸೂಲಿ ಮಾಡದಂತೆ ನಿರ್ದೇಶನ ನೀಡಿದೆ. ನ್ಯಾಯಾಲಯ ಆದೇಶವನ್ನು ಟೋಲ್ ಸಿಬ್ಬಂದಿ ರ್ನಿಲಸಿ, ಶುಲ್ಕ ವಸೂಲಿ ಮುಂದುವರಿಸಿದರೆ ರಾಷ್ಟ್ರೀಯ ಹೆದ್ದಾರಿ ದರ ನಿಗದಿ ಮತ್ತು ನಿಯಮ&2008ರಡಿ ಟೋಲ್ ಪ್ಲಾಜಾವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.