ಹಾರೋಹಳ್ಳಿ ಕೈಗಾರಿಕಾ ಪ್ರದೇಶ 
ಬೆಂಗಳೂರು ದಕ್ಷಿಣ

ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬೇಕು ಬಿಎಂಟಿಸಿ ಬಸ್

ಪ್ರಮುಖ ಮುಖ್ಯಾಂಶಗಳು

  • ನಿತ್ಯವೂ ಸಮಸ್ಯೆ ಎದುರಿಸುತ್ತಿರುವ ಕಾರ್ಮಿಕರು
  • ಹೆಚ್ಚಿನ ಹಣಕೊಟ್ಟು ಖಾಸಗಿ ವಾಹನ ಆಶ್ರಯಿಸುವ ಸ್ಥಿತಿ
  • ಏಷ್ಯಾದ 2ನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ

ಹಾರೋಹಳ್ಳಿ

ಏಷ್ಯಾದ 2ನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ಹಾರೋಹಳ್ಳಿ ಕೈಗಾರಿಕಾಪ್ರದೇಶಕ್ಕೆ ಬಸ್ ವ್ಯವಸ್ಥೆ ಇಲ್ಲದೆ ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ತೊಂದರೆಯಾಗಿದೆ.

ಸದ್ಯಕ್ಕೆ ಬೆಂಗಳೂರಿನ ಬನಶಂಕರಿಯಿಂದ ತಾಲೂಕಿನ ಜೈನ್ ಕಾಲೇಜಿನವರೆಗೆ ಬಿಎಂಟಿಸಿಬಸ್ ಬಿಟ್ಟಿದ್ದು, ಈ ಬಸ್‌ಗಳು ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸಿದರೆ ಕಾರ್ಮಿಕರಿಗೆ ಅನುಕೂಲವಾಗಲಿದೆಎಂದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ. ತಾಲೂಕಿನ ಜನತೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿಬೆಂಗಳೂರಿನ ಬನಶಂಕರಿಯಿಂದ ಕಗ್ಗಲಿಪುರ, ದಯಾನಂದ ಸಾಗರ್ ಆಸ್ಪತ್ರೆ, ಜಕ್ಕಸಂದ್ರ ಜೈನ್ ಯೂನಿವರ್ಸಿಟಿವರೆಗೆಬೆಳಗ್ಗೆಯಿಂದ ಸಂಜೆವರೆಗೂ ಬಿಎಂಟಿಸಿಯ ನಾಲ್ಕು ಬಸ್‌ಗಳು ಸಂಚರಿಸುತ್ತವೆ.

ಆದರೆ, ಕೈಗಾರಿಕಾ ಪ್ರದೇಶದಲ್ಲಿ ನೂರರು ಕಾರ್ಖಾನೆಗಳಿದ್ದು, ಸಾವಿರಾರುಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೆ ಬಸ್ ವ್ಯವಸ್ಥೆ ಇಲ್ಲ. ಕಾರ್ಮಿಕರು ಖಾಸಗಿ ವಾಹನಗಳಿಗೆದುಪ್ಪಟ್ಟು ದರ ನೀಡಿ ಪ್ರಯಾಣಿಸಬೇಕಿದೆ.

ಕೈಗಾರಿಕಾ ಪ್ರದೇಶಕ್ಕೆ ಬೆಂಗಳೂರು, ಕನಕಪುರ, ರಾಮನಗರ ಸೇರಿ ವಿವಿಧ ಭಾಗಗಳಿಂದಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಇವರೆಲ್ಲರೂ ಪಟ್ಟಣಕ್ಕೆ ಬಂದೇ ಕೈಗಾರಿಕಾ ಪ್ರದೇಶಕ್ಕೆ ತೆರಳಬೇಕಿದ್ದು,ಬಿಎಂಟಿಸಿ ಬಸ್ ಈ ಭಾಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ, ನಿಗಮಗಳಿಗೂಲಾಭವಾಗಲಿದೆ. ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹತ್ತಾರು ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಇನ್ನಾದರೂಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಕಾರ್ಖಾನೆಗಳಿಗೆ ಬರುವ ಕಾರ್ಮಿಕರಿಗೆ ಹಾರೋಹಳ್ಳಿಯಿಂದ ಸಾರಿಗೆ ವ್ಯವಸ್ಥೆಇಲ್ಲ. ಬೆಂಗಳೂರು ಬನಶಂಕರಿಯಿಂದ ಜೈನ್ ಯೂನಿವರ್ಸಿಟಿವರೆಗೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದು,ಅವುಗಳು ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸಿದರೆ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಪುಟ್ಟಲಿಂಗಯ್ಯ,

ಆಧ್ಯಕ್ಷರು, ವೈಭವ ಕರ್ನಾಟಕ, ಕನ್ನಡ ಪರ ಸಂಘಟನೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ವೇಗವಾಗಿ ಬೆಳೆಯುತ್ತಿದ್ದು, ಸಾವಿರಾರುಕಾರ್ಮಿಕರು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

ಶಶಿಧರ್, ಬಿಸ್ಕೆಟ್ ಪ್ಯಾಕ್ಟರಿ,ಸಿಎಚ್‌ಆರ್‌ಒ

ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರುಲಿಖಿತವಾಗಿ ಮನವಿ ನೀಡಿದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಪ್ರಭಾಕರ ರೆಡ್ಡಿ,

ಸಂಚಾರ ಸಹಾಯಕ ಅಧೀಕ್ಷಕರು, ಬಿಎಂಟಿಸಿ