ಮಾಜಿ ಮತ್ತು ಹಾಲಿ ಶಾಸಕರ ನಡುವೆ ಚಕ್ರಭಾವಿ ವಿಎಸ್ಸೆಸ್ಸೆನ್​ನಲ್ಲಿ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದ ವೇದಿಕೆಗೆ ತೆರಳಲು ಬಂದ ಶಾಸಕ ಎಚ್​.ಸಿ.ಬಾಲಕೃಷ್ಣ ಅವರನ್ನು ಮಾಗಡಿ ತಾಲೂಕಿನ ಹಲಸಬೆಲೆ ಗೇಟ್​ ಬಳಿ ಡಿವೈಎಸ್​ಪಿ ರವಿ ತಡೆದರು. 
ಬೆಂಗಳೂರು ದಕ್ಷಿಣ

ಅಧಿಕಾರ ಬಳಸಿ ಚರ್ಚೆಗೆ ತಡೆ

ರೇಷ್ಮೆ ನಗರ ಡೆಸ್ಕ್
ಮಾಗಡಿ: ಇನ್ನು ಜೆಡಿಎಸ್​ ಕಚೇರಿಯಲ್ಲೇ ಮಾಜಿ ಶಾಸಕ ಎ.ಮಂಜುನಾಥ್​ ಮಾತನಾಡಿ, ಶಾಸಕ ಬಾಲಕೃಷ್ಣ ಧೈರ್ಯವಂತ ರಾಜಕಾರಣ ಮಾಡಬೇಕಿತ್ತು. ಪೊಲೀಸರನ್ನು ಬಿಟ್ಟು ಹೇಡಿತನದಿಂದ ಚರ್ಚೆಗೆ ತೆರಳದಂತೆ ತಡೆದಿದ್ದಾರೆ. ಹಗರಣಗಳ ಚರ್ಚೆಗೆ ದಾಖಲೆ ಸಮೇತ ಬಂದಿದ್ದೇನೆ. ಅವರ ಯೋಗ್ಯತೆಯನ್ನು ಹರಾಜು ಹಾಕುತ್ತೇನೆ. ನನ್ನ ಮೇಲೆ ಕೇಸ್​ ಹಾಕಿಸಿ ಜೈಲಿಗೆ ಕಳುಹಿಸಲಿ, ಅವರ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ, ಅವರಿಗೆ ತಾಕತ್ತಿದ್ದಿದ್ದರೆ ನನ್ನ ಕಚೇರಿಗೆ ಬಂದು ಚರ್ಚೆಗೆ ಕರೆದುಕೊಂಡು ಹೋಗಬಹುದಿತ್ತು. ಏಕೆ ಈ ಹೇಡಿತನದ ಹುನ್ನಾರ ಮಾಡಿದ್ದಾರೆ ಎಂದು ಕಿಡಿಕಾರಿದರು.
ಶಾಸಕರ ಸಹೋದರ ಅಶೋಕ್​, ಬಿಡಿಸಿಸಿ ಬ್ಯಾಂಕ್​ನಲ್ಲಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ ತನಿಖೆ ನಡೆಯುತ್ತಿದೆ. ಆದರೆ ತನಿಖೆಗೆ ಶಾಸಕ ಬಾಲಕೃಷ್ಣ ಹಾಗೂ ಸಹೋದರ ತಡೆ ಹಾಕ್ತಿದ್ದಾರೆ. ಚರ್ಚಗೆ ಅವಕಾಶ ಕೊಟ್ಟಿದ್ದರೆ ಎಲ್ಲ ದಾಖಲೆ ಇಡುತ್ತಿದ್ದೆ. ಆದರೆ, ಅಧಿಕಾರ ಬಳಸಿಕೊಂಡು ಬಹಿರಂಗ ಚರ್ಚೆಗೆ ತಡೆಯೊಡ್ಡಿದ್ದಾರೆ ಎಂದು ಕಿಡಿಕಾರಿದರು.
ಹೋರಾಟ ನಿರಂತರ
ಸರಣಿ ಹಗರಣಗಳನ್ನು ಬಹಿರಂಗಗೊಳಿಸುತ್ತೇನೆ ಎಂದು ನಿಷೇಧಾೆ ಮಾಡಿಸಿರುವ ರಾಜಕೀಯ ಹ್ಯೇಯವಾದದ್ದು? ಹಗರಣಗಳಲ್ಲಿ ಭಾಗಿಯಾದವರಿಗೆ ನೀರು ಕುಡಿಸುವೆ. ಶಾಸಕರ ಕುಟುಂಬದ ಮಾನ, ಮಾರ್ಯಾದೆ ಹರಾಜು ಹಾಕುತ್ತೇನೆ ಎಂದು ಪೊಲೀಸರಿಂದ ನನ್ನನ್ನು ಬಂಧಿಸಿ ಧ್ವನಿ ಅಡಗಿಸುತ್ತಾರೆ, ಅವರದೇ ಸರ್ಕಾರ ಇದೆ, ಚರ್ಚೆಗೆ ಕರೆದೊಯ್ದಿದ್ದರೆ ಅವರ ಗೌರವ ಹೆಚ್ಚುತ್ತಿತ್ತು. ಕುದೂರು ಬಿಡಿಸಿಸಿ ಬ್ಯಾಂಕ್​ ಸಿಬಿಐ ತನಿಖೆಗೆ ಹೋಗಬೇಕಿತ್ತು. ತಪ್ಪಿಸಿ ಇಲಾಖೆ ತನಿಖೆ ನಡೆಸಿದ್ದಾರೆ. ಇದರ ಹಿಂದೆ ಯಾರು ಇದ್ದಾರೆ ಎಂದು ಚರ್ಚೆಯಲ್ಲಿ ಹೇಳುತ್ತಿದ್ದೆ ಎಂದು ಮಂಜುನಾಥ್​ ಹೇಳಿದರು.