ಮಾಗಡಿಯಲ್ಲಿ ಪಿಎಲ್​ಡಿ ಬ್ಯಾಂಕ್​ ಕಟ್ಟಡ ನಿರ್ಮಾಣಕ್ಕೆ ಸಚಿವ ಎಚ್​.ಸಿ.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಬಮುಲ್​ ಮಾಜಿ ಅಧ್ಯ ನರಸಿಂಹಮೂರ್ತಿ, ಯೂನಿಯನ್​ ಬ್ಯಾಂಕ್​ ಜಿಲ್ಲಾಧ್ಯ ಎಂ.ಕೆ.ಧನಂಜಯ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಕೆ.ಕೃಷ್ಣಮೂರ್ತಿ ಇತರರು ಇದ್ದರು.  
ಬೆಂಗಳೂರು ದಕ್ಷಿಣ

ದೇಶ ಪ್ರೇಮದ ಹೆಸರಲ್ಲಿ ಬಿಜೆಪಿ ನಾಟಕ

ಕಾಂಗ್ರೆಸ್ಸಿಗರೇ ದೇಶಪ್ರೇಮಿಗಳು! -ಜಿಲ್ಲಾ ಉಸ್ತುವಾರಿ ಸಚಿವ ಎಚ್​.ಸಿ.ಬಾಲಕೃಷ್ಣ ಹೇಳಿಕೆ

ಮಾಗಡಿ: ದೇಶಪ್ರೇಮ ಇರುವುದು ಕಾಂಗ್ರೆಸ್ಸಿಗರಲ್ಲಿ ಮಾತ್ರ. ಕಾಂಗ್ರೆಸ್​ನವರ್ಯಾರೂ ದೇಶಪ್ರೇಮದ ವಿರುದ್ಧ ಮಾತಾನಾಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್​.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಪಿಎಲ್​ಡಿ ಬ್ಯಾಂಕ್​ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮಲ್ಲಿನ ದೇಶ ಪ್ರೇಮ ಬೇರೆ ಯಾರಿಗೂ ಇಲ್ಲ. ದೇಶ ಪ್ರೇಮದ ಹೆಸರಿನಲ್ಲಿ ನಾಟಕ ಆಡುತ್ತಿರುವುದೇ ಬಿಜೆಪಿ. ದೇಶದಲ್ಲಿನ ಇಂದಿನ ವ್ಯವಸ್ಥೆ ಬಗ್ಗೆ ರಾಹುಲ್​ ಗಾಂಧಿ ಮಾತನಾಡುತ್ತಿದ್ದಾರೆ. ಬಿಜೆಪಿ, ಆರ್​ಎಸ್​ಎಸ್​ನವರ ವಿರುದ್ಧ ರಾಹುಲ್​ ಗಾಂಧಿ ಮಾತನಾಡುತ್ತಿದ್ದಾರೆ. ರಾಜಕೀಯದ ಬಣ್ಣ ಬಳಿಯಲಿಕ್ಕೆ ಬಿಜೆಪಿಯವರು ದೇಶಪ್ರೇಮದ ಹೆಸರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರು.

ಪ್ರಸ್ತುತ ಬಿಜೆಪಿಯವರ ಸಾಧನೆ ಏನು? ಅದಾನಿ, ಅಂಬಾನಿ ಅವರಿಗೆ ಇಡೀ ದೇಶವನ್ನೇ ಮಾರಿದ್ದಾರೆ.

ಖಾಸಗೀಕರಣ ಮಾಡಿ ಎಲ್ಲರನ್ನು ಬೀದಿಗೆ ತರುತ್ತಿದ್ದಾರೆ. ಅದೇ ಅವರ ದೊಡ್ಡ ಸಾಧನೆ ಎಂದು ಎಚ್​.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ರಾಜ್ಯಸರ್ಕಾರ ದಿವಾಳಿಯಾಗಿಲ್ಲ. ರಾಜ್ಯಸರ್ಕಾರದ ಬಗ್ಗೆ ದಿನ ನಿತ್ಯ ಒಂದಲ್ಲ ಒಂದು ಆರೋಪ ಮಾಡುತ್ತಾ ವಿಧಾನಸಬೆ ವಿರೋಧಪಕ್ಷ ನಾಯಕ ಆರ್​. ಅಶೋಕಣ್ಣನೇ ದಿವಾಳಿ ಆಗಿಬಿಟ್ಟಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಯಾವುದಾದರೂ ಸರ್ಕಾರದಲ್ಲಿ ಉತ್ತಮ ಕೆಲಸ ಕಾರ್ಯಗಳು ಆಗಿದ್ದರೆ ಅದು ಕಾಂಗ್ರೆಸ್​ ಸರ್ಕಾರದಿಂದ ಮಾತ್ರ. ಈ ಬಗ್ಗೆ ಬಿಜೆಪಿ ನಾಯಕರು ಚರ್ಚೆಗೆ ಬರಲಿ, ಅವರು ಏನು ಮಾಡಿದ್ದಾರೆ, ನಾವು ಏನು ಮಾಡಿದ್ದೀವಿ ಅಂತ ಗೊತ್ತಾಗುತ್ತದೆ. ಆರ್​. ಅಶೋಕಣ್ಣನೇ ಚರ್ಚೆಗೆ ಬರಲಿ, ಇಲ್ಲ ಅಂದರೆ ಮಾಜಿ ಡಿಸಿಎಂ ಡಾ.ಸಿ.ಎನ್​.ಅಶ್ವತ್ಥನಾರಾಯಣ್​ ಚರ್ಚೆಗೆ ಬಂದರೂ ಸರಿ ಎಂದು ಲೇವಡಿ ಮಾಡಿದರು.

ನಮ್ಮ ಮುಖ್ಯಮಂತ್ರಿಯವರಿಗೆ ಆಡಳಿತದ ಆಲೋಚನೆ ಸಾಕಷ್ಟಿದೆ. ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರ ಬಗ್ಗೆ ಹೆಚ್ಚು ಕಾಳಜಿವುಳ್ಳವರು. ಇಂದಿರಾಗಾಂಧಿ ಅವರ ಹೆಸರಿನಲ್ಲಿ ಮನೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಜಾಗವನ್ನು ಗುರುತು ಮಾಡಲಾಗಿದೆ ಎಂದರು.

ಬಮುಲ್​ ಮಾಜಿ ಅಧ್ಯ ನರಸಿಂಹಮೂರ್ತಿ, ಯೂನಿಯನ್​ ಬ್ಯಾಂಕ್​ ಜಿಲ್ಲಾಧ್ಯ ಎಂ.ಕೆ. ಧನಂಜಯ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಕೆ.ಕೃಷ್ಣಮೂರ್ತಿ, ಟಿ.ಜಿ. ವೆಂಕಟೇಶ್​, ಟಿಎಪಿಸಿಎಂಎಸ್​ ಅಧ್ಯ ರಮೇಶ್​, ಮಾಜಿ ಅಧ್ಯ ಶಿವಪ್ರಸಾದ್​, ಬೆಳ್ಳಿಯಪ್ಪ, ಕಲ್ಕೆರೆ ಶಿವಣ್ಣ, ಬ್ಯಾಂಕ್​ ಉಪಾಧ್ಯ ಹನುಮಯ್ಯ, ನಿರ್ದೇಶಕರಾದ ಚನ್ನಗಂಗಯ್ಯ, ಗೋಪಾಲಯ್ಯ, ಸಿದ್ದೇಗೌಡ, ಚಂದ್ರೇಗೌಡ, ಶಶಾಂಕ್​, ನಿರ್ಮಲಾ, ಯಶೋದಮ್ಮ ಇತರರು ಇದ್ದರು.

ಬರಪರಿಹಾರ ಕೊಡಿಸಿ: ಕೇಂದ್ರ ಸರ್ಕಾರ ಯಾವತ್ತೂ ನಮಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಬಿಜೆಪಿ ನಾಯಕರು ರಾಜ್ಯದ ಪರವಾಗಿ ಎಲ್ಲೂ ಮಾತನಾಡುತ್ತಿಲ್ಲ. ಅವರಲ್ಲೂ ಮನವಿ ಮಾಡ್ತೀವಿ, ಸೋಮಣ್ಣ ಹೇಳಿದ್ರುಎಚ್​.ಸಿ. ಬಾಲಕೃಷ್ಣಗೆ ಬಾಲ ಒಂದಿಲ್ಲ ಅಂತಾ. ಹೌದು, ನನಗೆ ಬಾಲ ಒಂದಿಲ್ಲ, ದಯಮಾಡಿ ನೀವು ಕೇಂದ್ರದಿಂದ ಬರಪರಿಹಾರ ಹಣ ಬಿಡುಗಡೆ ಮಾಡಿಸಿ, ಅವರು ಪರಿಹಾರ ಹಣ ಬಿಡುಗಡೆ ಮಾಡಿಸಿದರೆ ಆಗ ಗೊತ್ತಾಗುತ್ತೆ ಬಾಲ ಯಾರಿಗೆ ಇಲ್ಲಅಂತಾ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನುಬಾಲಕೃಷ್ಣ ಲೇವಡಿ ಮಾಡಿದರು.

ಚಿರತೆಗಳಿವೆ ಹುಷಾರ್​!: ತಾಲೂಕಿನಲ್ಲಿ ಚಿರತೆಗಳ ಹಾವಳಿ ಇದೆ. ನಾವು ಹುಷಾರಾಗಿ ಇರಬೇಕು. ಎಲ್ಲೆಲ್ಲಿ ಬೇಕು ಅಲ್ಲಿ ಚಿರತೆ ಸೆರೆಗೆ ಬೋನು ಇಟ್ಟಿದ್ದೇವೆ. ರೈತರು ರಾತ್ರಿ ಬೆಳಗ್ಗೆ ಕೈಯಲ್ಲಿ ಏನಾದರೂ ಅಸ್ತ್ರ ಇಟ್ಟುಕೊಂಡು ತಿರುಗಾಡಬೇಕು ಎಂದು ಸಚಿವರು ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕ್​ ರೈತರ ಸಂಸ್ಥೆ: ಬಿಡಿಸಿಸಿ ಬ್ಯಾಂಕ್​ ಅಧ್ಯ ಎಚ್​.ಎನ್​. ಅಶೋಕ್​ ಮಾತನಾಡಿ, ಬಿಡಿಸಿಸಿ ಬ್ಯಾಂಕ್​ ರೈತರ ಸಂಸ್ಥೆಯಾಗಿದ್ದು, ರೈತರ ಪರವಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಈಗಿರುವ ಬ್ಯಾಂಕ್​ ಕಟ್ಟಡ ಪಟ್ಟಣದ ಮಧ್ಯಭಾಗದಲ್ಲಿದ್ದು ತೀರ ಹಳೆಯದಾಗಿದೆ. ಇದರಿಂದಾಗಿ ಬೆಂಗಳೂರು& ಮಾಗಡಿ ಮುಖ್ಯರಸ್ತೆಯಲ್ಲಿ <4 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ 4 ಅಂತಸ್ತಿನ ಕಟ್ಟಡ ಕಟ್ಟಲಾಗುವುದು. ಇದರ ಜತೆ ರೈತರಿಗೆ ಅನುಕೂಲ ಕಲ್ಪಿಸಲು ಶುಭ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಪಾರ್ಟಿಹಾಲ್​ ನಿರ್ಮಿಸಲಾಗುವುದು. ಇನ್ನೊಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಇದಕ್ಕೆ ಸಹಕಾರಿ ಸಚಿವರು ಹೆಚ್ಚು ಸಹಕಾರ ನೀಡಿದ್ದಾರೆ ಎಂದರು.

ಪಿಎಲ್​ಡಿ ಬ್ಯಾಂಕ್​ ಅಧ್ಯ ಜಾಣಗೆರೆ ರವೀಶ್​ ಮಾತನಾದರು. ಬ್ಯಾಂಕ್​ ನಿರ್ದೇಶಕಿ ಭವ್ಯಾ ದೇವೇಂದ್ರ ಅವರು ಕಟ್ಟಡ ನಿರ್ಮಾಣಕ್ಕೆ 10 ಸಾವಿರ ಮೊತ್ತದ ಚೆಕ್​ ನೀಡಿದರು.