ಸಮುದಾಯ ಆರೋಗ್ಯ ಕೇಂದ್ರ ಬಿಡದಿ. 
ಬೆಂಗಳೂರು ದಕ್ಷಿಣ

ಬಿಡದಿ ಸರ್ಕಾರಿ ಸ್ಪತ್ರೆ ವೈದ್ಯರ ವರ್ಗಾವಣೆ ರದ್ದು

ಬಿಡದಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ವಿಭಾಗದ ಮೂವರು ವೈದ್ಯರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದಿದೆ.
30ಕ್ಕಿಂತ ಕಡಿಮೆ ಹೆರಿಗೆಯಾಗುವ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗಳಿಗೆ ವರ್ಗಾವಣೆಗೆ ಸರ್ಕಾರ ನಿರ್ದೇಶಿಸಿತ್ತು. ಅದರಂತೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡುವ ಬಗ್ಗೆ ಕಳೆದ ತಿಂಗಳು ಆರೋಗ್ಯ ಇಲಾಖೆಯಿಂದ ಆದೇಶ ಹೊರ ಬಂದಿತ್ತು. ಈ ಬಗ್ಗೆ ಜ.2ರಂದು "ಬಿಡದಿ ಆಸ್ಪತ್ರೆ ಹೆರಿಗೆ ವಿಭಾಗಕ್ಕೆ ಆಪರೇಷನ್​' ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿ, ಜನಪ್ರತಿನಿಧಿ, ಅಧಿಕಾರಿಗಳ ಗಮನ ಸೆಳೆದಿತ್ತು.
ಜನ ನಿರಾಳ
ವೈದ್ಯರ ವರ್ಗಾವಣೆ ಸುದ್ದಿ ಹೊರ ಬರುತ್ತಿದಂತೆ ಈ ಭಾಗದ ಜನರಲ್ಲಿ ಅದರಲ್ಲೂ ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳ ಪಾಲಕರಲ್ಲಿ ಆತಂಕ ಮನೆಮಾಡಿತ್ತು. ಮಕ್ಕಳು, ಗರ್ಭಿಣಿಯರನ್ನು ದೂರದ ರಾಮನಗರಕ್ಕೆ ಕರೆದುಕೊಂಡು ಹೋಗಬೇಕೆಂಬ ಭಯದಲ್ಲಿದ್ದರು. ಸದ್ಯ ವರ್ಗಾವಣೆ ರದ್ದಾಗಿರುವ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜನ ನಿರಾಳರಾಗಿದ್ದಾರೆ.