ಅಜ್ಮತ್ ಉಲ್ಲಾ ಖಾನ್ ಕಾರಿನ ಮೇಲೆ ದಾಳಿ ಮಾಡಿರುವುದು
- ಕೂದಲೆಳೆ ಅಂತರದಲ್ಲಿ ದಾಳಿಯಿಂದ ತಪ್ಪಿಸಿಕೊಂಡ ಅಜ್ಮತ್ ಉಲ್ಲಾ ಖಾನ್
- ರಾಮನಗರದ 22ನೇ ವಾರ್ಡ್ ಸದಸ್ಯ
ನಗರಸಭೆ ಸದಸ್ಯರೂ ಆದ ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ ಮೇಲೆ ಮತ್ತೊಂದು ರೌಡಿ ಗುಂಪು ನಗರದಲ್ಲಿ ಹಲ್ಲೆಗೆ ಯತ್ನಿಸಿದೆ.
ನಗರದ 22ನೇ ವಾರ್ಡ್ ಸದಸ್ಯ ಅಜ್ಮತ್ ಉಲ್ಲಾ ಖಾನ್ ಶುಕ್ರವಾರ ಸಂಜೆ 4.30ರ ಸುಮಾರಿಗೆ ಮನೆ ಕಡೆ ಬೈಕ್ನಲ್ಲಿ ಹೋಗುತ್ತಿದ್ದಾಗ ರಾಮನಗರ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಮತ್ತೊಬ್ಬ ರೌಡಿ ಶೀಟರ್ ಕವೇಲಿ ಮತ್ತು ಸಹಚರರು ಹಿಂದಿನಿಂದ ಅಜ್ಮತ್ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅಜ್ಮತ್ ಕೆಳೆಗೆ ಬಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ.
ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಒಬ್ಬರು ಕೂಗಿಕೊಂಡ ಹಿನ್ನೆಲೆಯಲ್ಲಿ ಕೂದಲೆಳೆ ಅಂತರದಲ್ಲಿ ಅಜ್ಮತ್ ದಾಳಿಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿಯೇ ಇದ್ದ ಮಸೀದಿಗೆ ಕಡೆಗೆ ರಕ್ಷಣೆಗಾಗಿ ಓಡಿ ಹೋಗಿದ್ದಾರೆ. ನಂತರ ನಗರದ ಜನತಾ ಕಾಲನಿಯಲ್ಲಿರುವ ಅಜ್ಮತ್ ಉಲ್ಲಾ ಖಾನ್ ಮನೆಗೆ ಬಂದಿರಬಹುದು ಎನ್ನುವ ಅನುಮಾನದ ಮೇಲೆ ಬೈಕ್ನಲ್ಲಿ ಮಾರಕಾಸ್ತ್ರಗಳೊಂದಿಗೆ ತೆರಳಿದ ಕವೇಲಿ ಮತ್ತು ಇತರ ಇಬ್ಬರು ಮನೆಗೆ ನುಗ್ಗಿದ್ದಾರೆ. ಈ ವೇಳೆ ಅಜ್ಮತ್ ಮನೆಯಲ್ಲಿ ಇರಲಿಲ್ಲ. ನಂತರ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರು ಹಾಗೂ ಎರಡು ಬೈಕ್ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಜಖಂಗೊಳಿಸಿದ್ದಾರೆ. ಮನೆಯ ಬಳಿ ನಡೆದ ಟನೆಯ ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ನಿಖರ ಕಾರಣ ತಿಳಿದಿಲ್ಲ
ಹಲ್ಲೆ ಯತ್ನದ ನಂತರ ಅಜ್ಮತ್, ಪುರ ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆಯೂ ಅಜ್ಮತ್ ಮೇಲೆ ಹಲವಾರು ಬಾರಿ ದಾಳಿ ಯತ್ನ ನಡೆದಿತ್ತು. ಹಳೇ ದ್ವೇಷವೇ ಟನೆಗೆ ಕಾರಣ ಎನ್ನಲಾಗುತ್ತಿದೆಯಾರೂ, ಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನುವ ಉತ್ತರ ಪೊಲೀಸರದ್ದು. ಆದರೆ ಕವೇಲಿ ಸಹ ರೌಡಿ ಶೀಟರ್ ಆಗಿದ್ದು, ರಾಮನಗರ ಐಜೂರು, ಪುರ ಪೊಲೀಸ್ ಠಾಣೆಗಳು ಮತ್ತು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಕವೇಲಿ ಈ ಹಿಂದೆ ಅಜ್ಮತ್ನೊಂದಿಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಕವೇಲಿ ಜತೆಯಲ್ಲಿ ಇದ್ದ ಇತರರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಗಳು, ಪುರ ವೃತ್ತದ ಇನ್ಸ್ಪೆಕ್ಟರ್ ರಮೇಶ್, ಪಿಎಸ್ಐ ತನ್ವೀರ್ ಅಹಮದ್ ಮುಂತಾದವರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.