ಕುದೂರು: ಪರವಾನಗಿ ಇಲ್ಲದೆ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ ಚಿಲ್ಲರೆ ಅಂಗಡಿ ಮಾಲೀಕನನ್ನು ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಆಡಲಿಂಗನಪಾಳ್ಯ ಗ್ರಾಮದ ಹನುಮಯ್ಯ ಬಂಧಿತ. ಅಂಗಡಿ ಬಳಿ ಮದ್ಯ ಸೇವಿಸುತ್ತಿದ್ದ 3&4 ಮಂದಿ ಬೀಟ್ನಲ್ಲಿದ್ದ ಕುದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ಪೇದೆ ದರ್ಶನ್ ಅವರನ್ನು ಕಂಡು ಓಡಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅಂಗಡಿ ತಪಾಸಣೆ ನಡೆಸಿದಾಗ 90 ಎಂಎಲ್ನ 5 ವಿಸ್ಕಿ ಪೌಚ್ಗಳು ದೊರೆತಿವೆ. ತಕ್ಷಣ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.