ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಅಕ್ರಮವಾಗಿ ಮದ್ಯ ಮಾರುತ್ತಿದ್ದವನ ಬಂಧನ

ಕುದೂರು: ಪರವಾನಗಿ ಇಲ್ಲದೆ ಪೆಟ್ಟಿಗೆ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ ಅಂಗಡಿ ಮಾಲೀಕನ ವಿರುದ್ಧ ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪ್ಪಸಂದ್ರ ಹೋಬಳಿಯ ಗಂಗೋನಹಳ್ಳಿಯ ಉಮೇಶ್​ ಆರೋಪಿ. ಅಂಗಡಿ ಬಳಿ ಮದ್ಯ ಸೇವಿಸುತ್ತಿದ್ದ 3&4 ಮಂದಿ ಬೀಟ್​ನಲ್ಲಿದ್ದ ಕುದೂರು ಪೊಲೀಸ್​ ಠಾಣೆಯ ಎಸ್​ಐ ಭೀಮೇಶಯ್ಯ ಹಾಗೂ ಪೇದೆ ದರ್ಶನ್​ ಅವರನ್ನು ಕಂಡು ಓಡಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅಂಗಡಿ ತಪಾಸಣೆ ನಡೆಸಿದಾಗ 180 ಎಂಎಲ್​ನ 4 ಮದ್ಯದ ಪೌಚ್​ಗಳು ದೊರತಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.