ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಗಾಂಜಾ ಮಾರಾಟಗಾರನ ಬಂಧನ

ಬಿಡದಿ: ನಲ್ಲಿಗುಡ್ಡೆ ಕೆರೆಯ ಅರಳಿಕಟ್ಟೆ ಬಳಿ ಗಾಂಜಾ ಮಾರುತ್ತಿದ್ದವನನ್ನು ಸೋಮವಾರ ಬಿಡದಿ ಪೊಲೀಸರು ಬಂಧಿಸಿದ್ದಾರೆ. ರಾಮನಗರ ನಿವಾಸಿ ಮೊಹಮದ್ ಮುಸಾವಿರ್ ಪಾಷ (55) ಬಂಧಿತ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ನಟರಾಜು ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿ ಸುಮಾರು 635ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.