ಸಾಂದರ್ಭೀಕ ಚಿತ್ರ 
ಬೆಂಗಳೂರು ದಕ್ಷಿಣ

ಜೂಜಾಡುತ್ತಿದ್ದವನ ಬಂಧನ

ಚಿಂತಾಮಣಿ: ತಾಲೂಕಿನ ನಾರಾಯಣಹಳ್ಳಿಯಲ್ಲಿ ಜೂಜಾಡುತ್ತಿದ್ದವರ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.
ಜು.24ರಂದು ಸಂಜೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್​ ಇನ್​ಸ್ಪೆಕ್ಟರ್​ ಶಿವರಾಜ್​ ನೇತೃತ್ವದ ತಂಡ ದಾಳಿ ನಡೆಸಿ ನಾರಾಯಣಹಳ್ಳಿಯ ಸುರೇಂದ್ರ (28) ಎಂಬಾತನನ್ನು ಬಂಧಿಸಿದೆ. ಗೋಪಿ (30), ವೆಂಕಟೇಶ್​ (45) ಹಾಗೂ ಆಂಜಿನಪ್ಪ (38) ಪರಾರಿಯಾಗಿದ್ದಾರೆ. 57,070 ರೂ. ನಗದು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.