ಬಿಡದಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
- ಬಿಡದಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ
- ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಸಾವು
- ಆಸ್ಪತ್ರೆಯಲ್ಲಿ ವೈಧ್ಯರ ನಿರ್ಲಕ್ಷ್ಯಕಾರಣವೇ>
ಬಿಡದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಹಲ್ಲೆಗಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವಿನ ಪ್ರಕರಣ ತನಿಖೆ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಹೌದು ಇದೇ ತಿಂಗಳ 7 ರ ಶನಿವಾರ ಕೇತಿಗಾನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಜಗಳ ನಡೆದು ರಾಜಸ್ಥಾನ ಮೂಲದ ವಿನೋದ್ ಕುಮಾರ್ ಸೈನಿ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಯಿಂದ ಗಾಯಗೊಂಡಿದ್ದ ವಿನೋದ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ. ಆದರೆ ಬುಧವಾರ ಆಸ್ಪತ್ರೆಯಲ್ಲಿ ವಿನೋದ್ ಸಾವನ್ನಪ್ಪಿದ್ದ.
ಪೊಲೀಸರ ಭೇಟಿ: ರಾಜಸ್ಥಾನ ಮೂಲದ ವ್ಯಕ್ತಿ ವಿನೋದ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಿಡದಿ ಭಾಗದಲ್ಲಿರುವ ರಾಜಸ್ಥಾನದ 100 ಕ್ಕು ಹೆಚ್ಚು ಮಂದಿ ಬಿಡದಿ ಪೊಲೀಸ್ ಠಾಣೆಗೆ ಬಂದು ಸಾವಿನ ತನಿಖೆಯನ್ನ ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ವಕೀಲರ ಮೂಲಕ ಬಂದು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಾಜಸ್ಥಾನ ಮೂಲಕ ಹಲವು ವ್ಯಾಪಾರಿಗಳು ಪೊಲೀಸ್ ಠಾಣೆ ಬಳಿ ಜಮಾ ವಣೆಗೊಂಡಿದ್ದರು.
ಪಿಎಂ ವರದಿ ನಂತರ ತನಿಖೆ ಚುರುಕು: ವಿನೋದ್ ಸಾವಿನ ಪ್ರಕರಣದ ತನಿಖೆ ಸ್ವಲ್ಪ ಮಟ್ಟಿಗೆ ಪೊಲೀಸರಿಗೆ ಕಗ್ಗಂಟಾಗಿದೆ. ಹಲ್ಲೆ ಮಾಡಿದ್ದಾರೆ ಎಂದು ಹೇಳಲು ಮೃತನ ದೇಹದಲ್ಲಿ ಯಾವುದೇ ಗಂಭೀರತೆಯ ಗಾಯಗಳು ಕಂಡು ಬಂದಿಲ್ಲ. ಹಾಗಾಗಿ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸೋಮವಾರದ ಒಳಗೆ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಪ್.ಎಸ್.ಎಲ್ ವರದಿಗಳು ಪೊಲೀಸರ ಕೈ ಸೇರಲ್ಲಿವೆ. ಈ ಎರಡು ವರದಿಗಳು ಬಂದ ಮೇಲೆ ಪೊಲೀಸರ ತನಿಖೆ ಚುರುಕುಗೊಳ್ಳಲಿದೆ. ಒಂದು ವೇಳೆ ಗಂಭೀರ ಹೊಡೆತದಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದರೆ ಸಂಜಯ್, ಹೊಂಬೇಗೌಡ ಸೇರಿದಂತೆ ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಾಗುತ್ತದೆ. ಮತ್ತೊಂದು ವೇಳೆ ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯತನದಿಂದ ಸಾವನ್ನಪ್ಪಿರುವ ಬಗ್ಗೆ ವರದಿ ಬಂದರೆ ಖಾಸಗಿ ಆಸ್ಪತ್ರೆ ಮೇಲೆ ಪ್ರಕರಣ ದಾಖಲಾಗುತ್ತದೆ.