ಜೋಗರದೊಡ್ಡಿಯ ನಿರ್ಮಿತಿ ಕೇಂದ್ರಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಗಾಣಕಲ್ ನಟರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಬಿಡದಿ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನಾ ಪ್ರದೇಶದ ವ್ಯಾಪ್ತಿಯ ಉದ್ಯೋಗಾಸಕ್ತರಿಗೆ ಪುನರ್ ನಿರ್ಮಾಣ ಮತ್ತು ಪುನರ್ ವಸತಿ ಕೇಂದ್ರ ತೆರೆಯಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದಿಸಲಾಗಿದೆ.
ಜೀವನೋಪಾಯಕ್ಕಾಗಿ ಕೌಶಲಾಧಾರಿತ ಮತ್ತು ಕೌಶಲಾಧಾರಿತವಲ್ಲದ ಉದ್ಯೋಗಗಳಿಗೆ ವಿದ್ಯಾಭ್ಯಾಸ ಹಾಗೂ ಆಸಕ್ತಿಗನುಗುಣವಾಗಿ ಕೌಶಲ ತರಬೇತಿ ನೀಡಲು ಹಾಗೂ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ಡಿ. 3 ರಂದು ಹಮ್ಮಿಕೊಂಡಿದ್ದ ಪ್ರಾಧಿಕಾರದ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದಿದ್ದು, ಅದರಂತೆ ಕೌಶಲ ಮತ್ತು ಉದ್ಯೋಗ ಕೇಂದ್ರವನ್ನು ತಣದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.
ಇದರ ಭಾಗವಾಗಿ ಮಂಗಳವಾರ ಸೂಕ್ತ ಸ್ಥಳ ನಿಗದಿಪಡಿಸುವ ನಿಟ್ಟಿನಲ್ಲಿ ಜೋಗರದೊಡ್ಡಿಯ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಜಾಗದ ಲಭ್ಯತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ
ಈ ವೇಳೆ ಮಾತನಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಗಾಣಕಲ್ ನಟರಾಜ್, ಯೋಜನಾ ಪ್ರದೇಶದ ವ್ಯಾಪ್ತಿಯ 26 ಗ್ರಾಮಗಳ ಉದ್ಯೋಗಾಸಕ್ತರಿಗೆ ಯುವಕ&ಯುವತಿಯರಿಗೆ, ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್, ತಂತ್ರಾಂಶ, ಟ್ಯಾಲಿ ಮತ್ತು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ನಿರ್ಮಾಣ ವಲಯದಲ್ಲಿ ಸ್ವಯಂ ಉದ್ಯೋಗ ಒಳಗೊಂಡಂತೆ, ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತರಬೇತಿ ನೀಡಿ, ಉದ್ಯೋಗಸ್ಥರನ್ನಾಗಿ ಮಾಡಲಾಗುತ್ತದೆ ಎಂದರು.
ಕರ್ನಾಟಕ ಕೌಶಲಾಭಿವೃದ್ಧಿ ಕೇಂದ್ರ, ಸೀಡಾಕ್, &ಆರ್&ಎಸ್ಇಟಿಐ ಸೇರಿದಂತೆ ಉನ್ನತ ಕೌಶಲ ಕೇಂದ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೌಶಲ ಮತ್ತು ಉದ್ಯೋಗ ನೀಡುವ ಬಗ್ಗೆ ಕ್ರಮವಹಿಸಲಾಗುವುದು ಹಾಗೂ ಈ ಸಂಬಂಧ ನೋಂದಾಯಿಸಿಕೊಳ್ಳಲು ಆಪ್ ಅನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿದ್ದು, ಶ್ರೀ ಬಳಕೆಗೆ ಬಿಡುಗಡೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.