ಅಂಚೀಪುರ ಗ್ರಾಮದಲ್ಲಿ ಪಾಂಡವರು ನೆಲೆಕಂಡಿದ್ದ ಕಲ್ಲಿನ ಮನೆಗಳು
ಬಿಡದಿ: ಒಂದು ಗ್ರಾಮವೆಂದ ಮೇಲೆ ಆ ಗ್ರಾಮಕ್ಕೊಂದು ಇತಿಹಾಸ ಇರುತ್ತದೆ. ಆ ಗ್ರಾಮಕ್ಕೆ ಹೆಸರು ಬರಲು ನೂರಾರು ವರ್ಷಗಳ ಹಿಂದೆ ನಡೆದ ಟನೆ, ವ್ಯಕ್ತಿಯ ಹೆಸರು ಅಥವಾ ಕೆಲವು ಕುರುಹುಗಳು ಸಾಯಾಗಿರುತ್ತವೆೆ. ಇಂತಹದೊಂದು ಇತಿಹಾಸ ಹೊಂದಿರುವ ಗ್ರಾಮವೇ ಅಂಚೀಪುರ.
ಹೌದು...ಬಿಡದಿ ತಾಲೂಕಿನ ಅಂಚೀಪುರದಲ್ಲಿ ಕಲ್ಲಿನ ಮಂಟಪಗಳು ಹಾಗೂ ದೇವಾಲಯಗಳಿವೆ. ಜತೆಗೆ ಸಾಂಸತಿಕ ಹಿನ್ನೆಲೆಯನ್ನು ಹೊಂದಿರುವ ಗ್ರಾಮವಾಗಿದೆ. ಗ್ರಾಮದ ಹಿರಿಯರಿಂದ ಬಂದಿರುವ ನಂಬಿಕೆ ಹಾಗೂ ಸ್ಥಳಿಯ ಇತಿಹಾಸದ ಪ್ರಕಾರ ಪಾಂಡವರು ವನವಾಸದ ಸಮಯದಲ್ಲಿ ಕೆಲವು ಕಾಲ ಈ ಗ್ರಾಮದಲ್ಲಿ ನೆಲೆಕಂಡಿದ್ದರು. ಈ ವೇಳೆ ಮನೆ ನಿರ್ಮಾಣ ಮಾಡಬೇಕಾದ ಸಂದರ್ಭ ಬಂದಾಗ ಒಂದು ರಾತ್ರಿಯಲ್ಲೆ ಕಲ್ಲುಗಳಿಂದ ಮನೆಗಳನ್ನು ನಿರ್ಮಿಸಿಕೊಂಡರಂತೆ ಎಂದು ಹೇಳಲಾಗುತ್ತದೆ.
ಗ್ರಾಮದಲ್ಲಿ 3 ರಿಂದ 4 ಕಲ್ಲಿನ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡಿದ್ದರು. ಸ್ವಲ್ಪ ದಿನ ಇದ್ದು ನಂತರ ಗ್ರಾಮದಿಂದ ತೆರಳಿದ್ದಾರೆ. ಇಂದಿಗೂ ಗ್ರಾಮದಲ್ಲಿ ಪಾಂಡವರು ನೆಲೆ ಕಂಡಿದ್ದ ಕಲ್ಲಿನ ಮನೆಗಳಿವೆ. ಇದರಲ್ಲಿ ಒಂದು ಮನೆಯನ್ನು ರಸ್ತೆ ಮಾಡುವ ಉದ್ದೇಶದಿಂದ ನೆಲಸಮ ಮಾಡಲಾಗಿದೆ. ಉಳಿದ ಮನೆಗಳು ಇಂದಿಗೂ ಹಾಗೆ ಇದ್ದು, ಕಲ್ಲಿನ ಮನೆಗಳ ಸುತ್ತ ಗಿಡ&ಗಂಟಿಗಳು ಬೆಳೆದು ನಿಂತಿವೆ. ಇನ್ನು ಈ ಕಲ್ಲಿನ ಮನೆಯಲ್ಲಿ ಇಂದಿಗೂ ಕೆಲವು ಆಯುಧಗಳು ಹಾಗೂ ಒಂದು ಖಡ್ಗ ಇದೆ ಎಂದು ಹೇಳಲಾಗುತ್ತಿದೆಯಾದರೂ ಈವರೆಗೆ ಗ್ರಾಮದ ಜನರು ಅದರ ತಂಟೆಗೆ ಹೋಗಿಲ್ಲ.
ಗ್ರಾಮದಲ್ಲಿ ಕೆಲವು ಪುರಾತನ ದೇವಾಲಯಗಳಿವೆ. ಅದರಲ್ಲೂ ಗ್ರಾಮದ ಅಧಿದೇವತೆ ಮಾರಮ್ಮ ದೇವಿಯನ್ನು ಶಕ್ತಿಶಾಲಿ ದೇವತೆಯಾಗಿ ಆರಾಧಿಸಲಾಗುತ್ತಿದೆ. ಈ ಹಿಂದೆ ಗ್ರಾಮವು ವೃಷಭಾವತಿ ನದಿಯ ದಡದಲ್ಲಿತ್ತು. ಕಾಲಕ್ರಮೇಣ ನದಿಯ ಹರಿವಿನ ಬದಲಾವಣೆಯಿಂದ ಸ್ವಲ್ಪ ದೂರಕ್ಕೆ ಗ್ರಾಮವನ್ನು ಸ್ಥಳಾಂತರಿಸಲಾಯಿತು. ಚೋಳರ ಕಾಲದಲ್ಲಿ ನಿರ್ಮಿಸಲಾದ ಕೆಲವು ಪುರಾತನ ದೇವಾಲಯಗಳು ಇಂದಿಗೂ ವೃಷಭಾವತಿ ನದಿಯೊಳಗೆ ಅಡಗಿವೆ ಎಂದು ನಂಬಲಾಗಿದೆ.
ಸಂರಸಲ್ಪಟ್ಟ ಆಯುಧಗಳಿಗೆ ಪೂಜೆ
ಅಂಚೀಪುರ ಗ್ರಾಮದಲ್ಲಿ ಸಂರಸಲ್ಪಟ್ಟಿರುವ ಕೆಲವು ಪುರಾತನ ಆಯುಧಗಳಿದ್ದು, ಪ್ರತಿವರ್ಷ ಯುಗಾದಿ ಹಾಗೂ ಆಯುಧ ಪೂಜೆ ಸಂದರ್ಭದಲ್ಲಿ ಇಡೀ ಗ್ರಾಮಸ್ಥರು ಸಾಮೂಹಿಕವಾಗಿ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿನ ಬಹುಪಾಲು ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಹೈನುಗಾರಿಕೆ ಹಾಗೂ ರೇಷ್ಮೆ ಬೆಳೆ ಅವಲಂಬಿಸಿದ್ದಾರೆ.