ಪ್ರಮುಖ ಮುಖ್ಯಾಂಶಗಳು
ರಾಮನಗರ
ಸಾರ್ವಜನಿಕರು ಸಲಹೆ ನೀಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ನಗರದ ಅರ್ಚಕರಹಳ್ಳಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಹೆಲ್ತ್ ಸಿಟಿ ಬಡಾವಣೆಯ ಮರು ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂಬುದು ನಮ್ಮ ಕನಸಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆ ಬದ್ಧರಾಗಿದ್ದಾರೆ. ಈ ವಿಚಾರದಲ್ಲಿ ಸಿಎಂಗೆ ಅವರz್ದೆÃ ಆದ ಕನಸಿದೆ. ಆದರೆ, ಸಾರ್ವಜನಿಕರು ಮತ್ತು ಮಾಧ್ಯಮದವರು ಟೀಕೆ ಮಾಡುವುದನ್ನು ಬಿಟ್ಟು ನಿಮ್ಮ ಆಲೋಚನೆಗಳನ್ನು ಜಿಲ್ಲಾಧಿಕಾರಿಯವರಿಗೆ ನೀಡಿ. ಅದು ಸೂಕ್ತವೆನಿಸಿದರೆ ಖಂಡಿತವಾಗಿ ಅದನ್ನು ಜಾರಿಗೆ ತರುತ್ತೇವೆ ಎಂದರು.
ಚನ್ನಪಟ್ಟಣದ ಕಣ್ವ ಬಡಾವಣೆ, ರಾಮನಗರ ಹೆಲ್ತ್ ಸಿಟಿ ಮತ್ತು ಜೀಗೇನಹಳ್ಳಿ ಬಡಾವಣೆಗಳಲ್ಲಿ 1600ಕ್ಕೂ ಹೆಚ್ಚು ನಿವೇಶನಗಳನ್ನು ನೀಡಿ 16 ವರ್ಷಗಳು ಕಳೆದಿವೆ. ಆದರೆ, ನಿವೇಶನ ಕೊಂಡವರಿಗೆ ಕೊಡಬೇಕಾದ ದಾಖಲೆಗಳನ್ನು ಕೊಡಲು ಇಲ್ಲಿಯವರೆಗೆ ಆಗಿರಲಿಲ್ಲ. ಕಷ್ಟಕ್ಕೆ ನಿವೇಶನ ಮಾರಲೂ ಸಹ ಆಗದಂತಹ ಪರಿಸ್ಥಿತಿಗೆ ಸಿಲುಕಿದ್ದರು. ಹಣ ಕಟ್ಟಿದ್ದೀನಿ ನಮಗೆ ದಾಖಲೆ ಕೊಡಿ ಎಂದರೆ, ದಾಖಲೆ ಇಲ್ಲ, ಪ್ರಕರಣ ಕೋರ್ಟ್ನಲ್ಲಿದೆ, ಸಿಬಿಐಗೆ ಹೋಗಿದೆ ಎಂದು ಹೇಳಿ ಕೈ ತೊಳೆದುಕೊಂಡಿದ್ದರು. ಇದು ನಿವೇಶನ ಖರೀದಿಸಿದ್ದವರ ಆತಂಕಕ್ಕೆ ಕಾರಣವಾಗಿತ್ತು. ಆದರೆ, 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಡಿಕೆಶಿ ಅವರ ನೇತೃತ್ವದಲ್ಲಿ, ನಾನು ಸಂಸದನಾಗಿದ್ದ ವೇಳೆ, ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿ, ನಿರಂತರ ಮಾತುಕತೆ ನಡೆಸಿದ ಪರಿಣಾಮವಾಗಿ ಯಾವುದು ಅಸಾಧ್ಯ ಎನ್ನುವಂತೆ ಇತ್ತೋ ಅದನ್ನು ಸಾಧ್ಯ ಮಾಡಿz್ದÉÃವೆ. ಈಗ 40 ಕೋಟಿ ರೂ.ವೆಚ್ಚದಲ್ಲಿ ಮೂರು ಬಡಾವಣೆಗಳಿಗೆ ಮೂಲ ಸೌಕರ್ಯ ಮಾಡಿಕೊಡಲಾಗುತ್ತಿದೆ ಎಂದರು.
ಹೊಸ ಲೇಔಟ್:
ಪ್ರಾಧಿಕಾರದಿಂದ ರಾಜೀವ್ ಗಾಂಧಿ ಆರೋಗ್ಯ ವಿವಿ ಬಳಿ 116 ಎಕರೆ ಪ್ರದೇಶದಲ್ಲಿ 50:50ರ ಅನುಪಾತದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಸರ್ಕಾರದಿಂದ ಒಪ್ಪಿಗೆ ದೊರೆಯಲಿದೆ. ಈಗಾಗಲೇ 200 ಎಕರೆ ಪ್ರದೇಶದಲ್ಲಿ ಆರೋಗ್ಯ ವಿವಿ ನಿರ್ಮಾಣವಾಗುತ್ತಿದೆ. ಆಡಳಿತ ಭವನ ಮತ್ತು ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ವಿವಿ ನಿರ್ಮಾಣ ಮಾಡಿಕೊಡುವ ಸಂಬAಧ ಈಗಾಗಲೇ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಇದು ಹಂತ ಹಂತವಾಗಿ ನಿರ್ಮಾಣವಾಗಲಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಮಾತನಾಡಿ, 2009-10ರಲ್ಲಿ ಕುಮಾರಸ್ವಾಮಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ನಿವೇಶನ ಹಂಚಿಕೆ ಆಗಿತ್ತು. ಅಲ್ಲಿಂದ 2023ರವರೆಗೂ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿರಲಿಲ್ಲ. ಇದರಿಂದಾಗಿ ಈ ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡಿದ್ದವರು ತ್ರಿಶಂಕು ಪರಿಸ್ಥಿತಿಯಲ್ಲಿದ್ದರು. 2023ರಲ್ಲಿ ಇಕ್ಬಾಲ್ ಹುಸೇನ್ ಶಾಸಕರಾದ ಮೇಲೆ ಲೇ ಔಟ್ ಹೊಸ ರೂಪ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದರು.
ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಜನರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಕಾರಣಕ್ಕೆ ದಾಖಲೆಗಳೇ ಇಲ್ಲದ, ಕೇವಲ 2 ರೂ. ಛಾಪಾ ಕಾಗದದಲ್ಲಿ 7-8 ಕೋಟಿ ರೂ. ವ್ಯವಹಾರ ಮಾಡಿದ್ದ ಈ ಲೇಔಟ್‌ನ ಸಮಸ್ಯೆ ಪರಿಹಾರ ಮಾಡುವುದು ಕಷ್ಟದ ಕೆಲಸವಾಗಿತ್ತು. ಆದರೆ, ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಅವರ ಸಹಕಾರದೊಂದಿಗೆ ಸಮಸ್ಯೆ ನಿವಾರಣೆ ಮಾಡಿ, ಈಗ ಅಭಿವೃದ್ಧಿಗೆ ಚಾಲನೆ ನೀಡಿz್ದÉÃವೆ ಎಂದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾಧುಕೋಕಿಲ, ಕೆಎಸ್‌ಐಸಿ ಉಪಾಧ್ಯಕ್ಷ ಗಂಗಾಧರ್, ಎಂಎಲ್‌ಸಿ ಎಸ್.ರವಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷÀ ಗಾಣಕಲ್ ನಟರಾಜ್, ಚೇತನ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಸಿಇಒ ಅನ್ಮೋಲ್ ಜೈನ್, ಎಸಿ ಬಿನೋಯ್ ಇತರರು ಇದ್ದರು.
ರಾಮನಗರ ತಾಲೂಕಿನಲ್ಲಿ 300 ಎಕರೆಯನ್ನು ಸೂರಿಲ್ಲದವರಿಗೆ ಮನೆ ನೀಡಲು ಮೀಸಲಿಡಲಾಗಿದೆ. ಶೀಘ್ರದಲ್ಲಿಯೇ ಇದಕ್ಕೆ ಚಾಲನೆ ನೀಡಲಾಗುವುದು. ಕೈಲಾಂಚ ಮತ್ತು ಕಸಬಾ ಹೋಬಳಿಗೆ ಶೀಘ್ರ ಕುಡಿಯುವ ನೀರು ಪೂರೈಕೆಯಾಗಲಿದೆ.
| ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ
ಚನ್ನಪಟ್ಟಣದ ಕಣ್ವ ಬಡಾವಣೆ ಅಭಿವೃದ್ಧಿ ಕೆಲಸವೂ ಶೀಘ್ರವೇ ಆಗಲಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಸುವರ್ಣ ಅವಕಾಶ ಲಭಿಸಿದ್ದು, ಪ್ರಗತಿ ಕಾಣಲಿದೆ.
| ಸಿ.ಪಿ.ಯೋಗೇಶ್ವರ, ಶಾಸಕ
------
ಯಾರು ಹೆಚ್ಚು ಮಾತನಾಡುತ್ತಾರೋ, ಯಾರನ್ನು ನೀವು ನಾಯಕರೆಂದು ಬಿಂಬಿಸುತ್ತೀರೋ ಅವರ ಪಾಪದ ಫಲ ಇದು. ಬೆಂಗಳೂರು ದಕ್ಷಿಣ ಜಿಲ್ಲೆಯ ಪಾಪದ ಕೊಳೆಯನ್ನು ಹಂತಹAತವಾಗಿ ತೊಳೆಯುವ ಕೆಲಸ ಮಾಡುತ್ತಿz್ದÉÃವೆ.
| ಡಿ.ಕೆ.ಸುರೇಶ್, ಅಧ್ಯಕ್ಷ, ಬಮುಲ್
=======
ಜನರಿಗೆ ಬುದ್ಧಿಭ್ರಮಣೆ ಆಗಿದೆಯೋ, ಇಲ್ಲ ಮರೆತು ಬಿಟ್ಟಿದ್ದಾರೋ ಗೊತ್ತಿಲ್ಲ. ಚುನಾವಣೆ ಬಂದಾಗ ನಾವು ಮಾಡಿದ ಕೆಲಸ ಮರೆಯುತ್ತಾರೆ. ಕಣ್ಣು ಮುಚ್ಚಿ ಮತ ಹಾಕುವುದನ್ನು ಕಲಿತಿದ್ದಾರೆ. ನಾವು ಜಿಲ್ಲೆಯ ಮಕ್ಕಳು, ನಾವು ಹುಟ್ಟು, ಸಾವು, ಜೀವನ ಎಲ್ಲವೂ ಇಲ್ಲಿಯೇ. ಕೆಲವರು ಹೊರ ಜಿಲ್ಲೆಯಲ್ಲಿ ಹುಟ್ಟಿ, ಇಲ್ಲಿ ಬಂದು ಸಾಯಬಹುದು. ನಮ್ಮ ಮೇಲೆ ವಿಶ್ವಾಸವಿಡಿ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿz್ದÉÃವೆ.
| ಎಚ್.ಸಿ.ಬಾಲಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ