ಗೌಡಗೆರೆ ಕ್ಷೇತ್ರದ ಶ್ರೀ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆದಿಚುಂಚನಗಿರಿ ಶ್ರೀಗಳು ಭೇಟಿ ನೀಡಿದರು. ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಡಾ. ಮಲ್ಲೆಶ್ ಗುರೂಜಿ ಹಾಗೂ ಇತರ ಶ್ರೀಗಳು ಇದ್ದರು.
ಚನ್ನಪಟ್ಟಣ: ಆದಿಚುಂಚನಗಿರಿ ಮಠವು ರಾಷ್ಟ್ರ ಹಾಗೂ ರಾಜ್ಯ ಆಳುವವರನ್ನು ಸೃಷ್ಟಿ ಮಾಡುತ್ತದೆಯೇ ಹೊರತು, ತಾನೇ ಸ್ವತ@ ರಾಜಕಾರಣ ಮಾಡುವುದಿಲ್ಲ. ಹಾಗಾಗಿ ಭಕ್ತರಲ್ಲಿ ಈ ಬಗ್ಗೆ ಗೊಂದಲ ಬೇಡ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, "ಉತ್ತರಪ್ರದೇಶದ ಯೋಗಿ ಆದಿತ್ಯನಾಥರು ಸಿಎಂ ಆಗುವ ಮುಂಚೆಯಿಂದಲೂ ಅವರ ಮನೆತನ ರಾಜಕಾರಣದಲ್ಲಿತ್ತು. ಆದರೆ, ಆದಿಚುಂಚನಗಿರಿ ಮಠದವರು ಎಂದಾದರೂ ರಾಜಕಾರಣ ಪ್ರವೇಶ ಮಾಡಿದ್ದನ್ನು ನೋಡಿದ್ದೀರಾ? ಅವರಿಗೂ ನಮಗೂ ವ್ಯತ್ಯಾಸ ಇಷ್ಟೇ. ನಮ್ಮದು ಶುದ್ಧ ಆಧ್ಯಾತ್ಮಿಕ ಮಠ. ರಾಜಕಾರಣದ ಸಂಪರ್ಕ ಒಂದಿಷ್ಟೂ ಇಲ್ಲ' ಎಂದರು.
"ನಾಥ ಪರಂಪರೆಯ ಯೋಗಿ ಆದಿತ್ಯನಾಥ ಸಿಎಂ ಆದಾಗ ಇಲ್ಲಿ ಏಕೆ ಚುಂಚನಗಿರಿಶ್ರೀಗಳು ಸಿಎಂ ಆಗಬಾರದು ಎಂಬ ಚರ್ಚೆ ಆರಂಭವಾಯಿತು. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಅದು ಅವರ ಪರಂಪರೆ. ಆದರೆ, ನಮ್ಮ ಪೀಠ ಧಾರ್ಮಿಕ ಪರಂಪರೆಯ ಹಾದಿಯಲ್ಲಿ ಮಾತ್ರ ಸಾಗಿ ಬಂದಿದೆ. ಮುಂದೆಯೂ ಈ ದಾರಿಯಲ್ಲಿಯೇ ಶ್ರೀಮಠ ಸಾಗುತ್ತದೆ' ಎಂದರು.
"ನಾಥ ಪರಂಪರೆಯನ್ನು ಸಾರುತ್ತಿರುವ ಜೋಗಪ್ಪರು ಕಾಲಭೈರವನ ಮಕ್ಕಳು. ಹಾಗಾಗಿ ಜೋಗಪ್ಪರು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ ಜತೆಗೆ ಜನರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಬೇಕು. ಕೇವಲ ಕುಟುಂಬದ ಹಿರಿಮಗನಿಗೆ ಕಿವಿ ಚುಚ್ಚಿಸಿ ಜೋಗಪ್ಪನನ್ನು ಬಿಡುವುದಷ್ಟೇ ನಿಮ್ಮ ಕೆಲಸವಲ್ಲ. ನಿಮ್ಮ ಮಕ್ಕಳನ್ನು ಮಠಕ್ಕೂ ತಂದು ಬಿಡಿ' ಎಂದು ಕರೆ ನೀಡಿದರು.
"ಗೌಡಗೆರೆ ೇತ್ರದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿಯ ಮಹಿಮೆಗೆ ಇಲ್ಲಿಗೆ ಬರುವ ಭಕ್ತರೇ ಸಾ. ೇತ್ರದ ಧರ್ಮದರ್ಶಿ ಮಲ್ಲೆಶ್ ಗುರೂಜಿ ಶ್ರಮಪಟ್ಟ್ಟು ಅದ್ಭುತ ೇತ್ರ ನಿರ್ಮಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಕಾಲಭೈರವನ ಆರಾಧಕರಾದ ಜೋಗಿಗಳ ಸಮಾವೇಶ ಉತ್ತಮ ಕಾರ್ಯ. ಭಾನುವಾರ ಇಷ್ಟೊಂದು ಪ್ರಮಾಣದ ಜೋಗಪ್ಪಂದಿರ ದರ್ಶನ ಮಾಡಿದ್ದು ಹರ್ಷ ತಂದಿದೆ' ಎಂದು ಶ್ರೀಗಳು ಹೇಳಿದರು.
ಇದೇ ಮೊದಲ ಬಾರಿಗೆ ಗೌಡಗೆರೆ ೇತ್ರಕ್ಕೆ ಆಗಮಿಸಿದ ಚುಂಚಶ್ರೀಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ೇತ್ರದ ಧರ್ಮದರ್ಶಿ ಡಾ. ಮಲ್ಲೆಶ್ ಗುರೂಜಿ ನೇತೃತ್ವದಲ್ಲಿ ನೂರಾರು ಜೋಗಪ್ಪಗಳು, ವಿವಿಧ ಕಲಾತಂಡಗಳು ಹಾಗೂ ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ತಾಯಿ ಗರ್ಭಗುಡಿಯಲ್ಲಿ ನಿರ್ಮಲಾನಂದನಾಥ ಶ್ರೀಗಳು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಶ್ರೀೇತ್ರದಿಂದ ಪುಷ್ಪಾಭಿಷೇಕ ಮಾಡುವ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ನಾರಾಯಣ ಧಾಮದ ಶ್ರೀ ಸಾಯಿಕೀರ್ತಿನಾಥ ಸ್ವಾಮೀಜಿ, ಮಂಡ್ಯದ ಸಂಕೀರ್ತಿನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಬಸವಾನಂದ ಸ್ವಾಮೀಜಿ ಹಾಗೂ ಇತರರು ಉಪಸ್ಥಿತರಿದ್ದರು.
ಅಹಂಕಾರ ಎಂಬುದು ಕ್ಯಾನ್ಸರ್ ಇದ್ದ ಹಾಗೆ. ಅದು ವ್ಯಕ್ತಿಗೆ ಅಂಟಿದ ದೊಡ್ಡ ಶಾಪ. ಭಗವಂತನಿಂದ ನಮ್ಮನ್ನು ದೂರ ಮಾಡುತ್ತದೆ. ಚಿಕಿತ್ಸೆ ಕೊಡಿಸದೆ ಕ್ಯಾನ್ಸರ್ ಗುಣಪಡಿಸಬಹುದು. ಆದರೆ, ಅಹಂಕಾರ ತಲೆಗೇರಿದರೆ ಗುಣಪಡಿಸುವುದು ಕಷ್ಟ. ಮನಸ್ಸು ಶುದ್ಧವಾಗಿರಬೇಕು. ಆಗ ಮಾತ್ರ ಬದುಕಿಗೊಂದು ಅರ್ಥ ಎಂದು ನಿರ್ಮಲಾನಂದನಾಥಶ್ರೀಗಳು ಹೇಳಿದರು.