ಚನ್ನಪಟ್ಟಣದ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಟಕ.
ಕೆಂಗಲ್ ದೇಗುಲದಲ್ಲಿ ಆರ್ಓ ಪ್ಲಾಂಟ್ ಸ್ಥಾಪನೆಯಲ್ಲಿ ಗೋಲ್ಮಾಲ್
ಚನ್ನಪಟ್ಟಣ: ಪುಣ್ಯೇತ್ರಕ್ಕೆ ಬರುವ ಭಕ್ತರ ನೀರಿನ ದಾಹ ತಣಿಸಲು ಲಾಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಟಕ ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲದಂತಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲೂ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹೌದು. ತಾಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ಪುಣ್ಯೇತ್ರದಲ್ಲಿ ಮೂರು ವರ್ಷಗಳ ಹಿಂದೆ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಟಕ ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಕೊರತೆಯಿಂದ ಟಕ ಕೆಟ್ಟು ನಿಂತಿದೆ. ಅಲ್ಲೊಂದು ಕಟ್ಟಡವಾಯಿತು, ಯಂತ್ರ ಜೋಡಣೆಯಾಯಿತು, ಮೂರು ದಿನ ನೀರು ಹರಿಯಿತು ಎಂಬುದನ್ನು ಬಿಟ್ಟರೆ, ಈ ಟಕ ನಿಷ್ಕ್ರಿಯಗೊಂಡು ಹಲವು ತಿಂಗಳುಗಳೇ ಕಳೆದಿವೆ.
ಈ ಹಿಂದೆಕ್ಷೇತ್ರ ಶಾಸಕರಾಗಿದ್ದ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ,ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಟಕ ನಿರ್ಮಿಸಲು 5 ಲ ರೂ. ಅನುದಾನ ನೀಡಿದ್ದರು. ಇನ್ನು ಟಕ ನಿರ್ಮಾಣ ಉಸ್ತುವಾರಿಯನ್ನು ಜಿಪಂ ಇಂಜಿನಿಯರ್ ವಿಭಾಗಕ್ಕೆವಹಿಸಲಾಗಿತ್ತು. ಆದರೆ, ಟಕದ ನಿರ್ಮಾಣದ ಜವಾಬ್ದಾರಿ ಹೊತ್ತ ಗುತ್ತಿಗೆದಾರ ನೆಪ ಮಾತ್ರಕ್ಕೆ ಟಕ ನಿರ್ಮಿಸಿದ್ದಾರೆ. ಜತೆಗೆ ಟಕವನ್ನು ಈವರೆಗೂ ಯಾರ ಸುಪರ್ಧಿಗೂ ನೀಡಿಲ್ಲ. ದೇವಾಲಯದ ಆವರಣದಲ್ಲಿ ಕೇವಲ ಸಾಗುಡ್ಡೆಯಾಗಿ ಸಣ್ಣ ಕಟ್ಟಡ ನಿಂತಿದೆಯೇ ಹೊರತು, ಘಟಕದಿಂದ ಯಾರೊಬ್ಬರ ನೀರಿನ ದಾಹ ತೀರಿಲ್ಲ.
ಅಧಿಕಾರಿ, ಗುತ್ತಿಗೆದಾರನಿಂದ ಅಕ್ರಮ?
ನೀರಿನ ಘಟಕ ನಿರ್ಮಾಣ ವಿಚಾರದಲ್ಲಿ ಸಂಬಂಧಿಸಿದ ಜಿಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಭಕ್ತರ ಅನುಕೂಲದ ನೆಪದಲ್ಲಿ ಶಾಸಕರ ಅನುದಾನ ತಂದು ಕೇವಲ ಕಟ್ಟಡ ಹಾಗೂ ಕಳಪೆ ಯಂತ್ರ ಜೋಡಿಸಿ ಕೈ ತೊಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅಧಿಕಾರಿಗಳೂ ಸಾಥ್ ನೀಡಿದ್ದು, ನೀರಿನ ವಿಚಾರದಲ್ಲೂ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಟಕ ನಿರ್ಮಾಣವಾಗಿ ಸುಮಾರು ಮೂರು ವರ್ಷಗಳೇ ಕಳೆದಿದ್ದು, ಯಂತ್ರಗಳು ಇದೆಯೋ? ಇಲ್ಲವೋ? ಎಂಬ ಅನುಮಾನ ಮೂಡಿದೆ.
ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿರುವ ಪುರಾಣ ಪ್ರಸಿದ್ಧ ಪುಣ್ಯೇತ್ರ ಕೆಂಗಲ್ ಆಂಜನೇಯಸ್ವಾಮಿ ಸನ್ನಿಧಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಶ್ರೀ ೇತ್ರದಲ್ಲಿ ದೇವರ ಸೇವೆ (ಬಾಡೂಟ) ಅದ್ದೂರಿಯಾಗಿ ನಡೆಯುತ್ತದೆ.ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಹಿಂದಿನಿಂದಲೂ ಕಾಡುತ್ತಿದೆ. ಕೆಲವೇ ದಿನಗಳಲ್ಲಿ ಪ್ರಸಿದ್ಧ ದನಗಳ ಜಾತ್ರೆ ಆರಂಭಗೊಳ್ಳಲಿದ್ದು, ಈಗಲಾದರೂ, ಸಂಬಂಧಿಸಿದ ಜಿಪಂ ಹಾಗೂ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳು ಇತ್ತ ಗಮನಹರಿಸಿ, ಮುಂಬರುವ ಜಾತ್ರೆಗಾದರೂ ನೀರಿನ ಟಕದಿಂದ ದಣಿದವರಿಗೆ ನೀರುಣಿಸುವ ಕೆಲಸ ಮಾಡಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ಶ್ರೀ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಟಕ ನಿರ್ಮಾಣವಾಗಿರುವುದು ಎಷ್ಟು ಸತ್ಯವೋ.. ಆ ಟಕ ಆರಂಭದಿಂದ ಈವರೆಗೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಟಕದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಕನಿಷ್ಠ ಟಕವನ್ನು ದೇವಾಲಯ ಸಮಿತಿಗೆ ಹಸ್ತಾಂತರಿಸುವ ಕೆಲಸವೂ ಆಗಿಲ್ಲ. ಈ ಬಗ್ಗೆ ಜಿಪಂ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು.
ಈ ವಿಭಾಗದ ಜವಾಬ್ದಾರಿ ಹೊತ್ತು ಕೆಲವೇ ತಿಂಗಳಾಗಿದ್ದು, ಕುಡಿಯುವ ನೀರಿನ ಟಕದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ವಿಚಾರಿಸವಾಗಿದೆ. ಇನ್ನೆರಡು ದಿನಗಳಲ್ಲಿ ಟಕವನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವ ಜತೆಗೆ, ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು.