ಹಳಿ ಮೇಲೆ ವಿದ್ಯುತ್ ಕಂಬ ಬಿದ್ದು, ರೈಲು ನಿಂತಿದೆ.
ಬಿಡದಿ: ಬಿರುಗಾಳಿ ಸಹಿತ ಮಳೆ ಬಿಡದಿ ವ್ಯಾಪ್ತಿಯಲ್ಲಿ ಗುರುವಾರವೂ ಮುಂದುವರಿದಿದ್ದು, ಸಂಜೆ ಪ್ರಾರಂಭವಾದ ಬಿರುಗಾಳಿ ಸಹಿತ ಮಳೆ ಹಲವು ಅವಾಂತರ ಸೃಷ್ಟಿಸಿದೆ.
ಬಿರುಗಾಳಿ ಸಹಿತ ಮಳೆಗೆ ಬೆಂಗಳೂರು&ಮೈಸೂರು ಎಕ್ಸ್ಪ್ರೆಸ್ ವೇ ಸಂಚಾರ ಅಸ್ತವ್ಯಸ್ತವಾಗಿದೆ. ಪ್ರತಿಷ್ಠಿತ ಸತ್ವ ಅಪಾರ್ಟ್ ಮೆಂಟ್ ಹಿಂಬಂದಿ ಜಾಹೀರಾತಿನ ದೊಡ್ಡ ಕಬ್ಬಿಣದ ಫಲಕ ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆ ಮೇಲೆ ಬೋರ್ಡ್ ಬಿದ್ದ ಪರಿಣಾಮ ಲಕ್ಷಿ$್ಮ ಸಾಗರ ಗೇಟ್ನಿಂದ ವಾಜರಹಳ್ಳಿಗೆ ಹೋಗುವ ಜನರು ಸುತ್ತಿ ಬಳಸಿ ಬರುವ ಪರಿಸ್ಥಿತಿ ನಿರ್ಮಾಣ ವಾಗಿತ್ತು.
ಕಾಡುಮನೆ ಕ್ರಾಸ್ನಿಂದ ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಸಂಚಾರ ಮಾಡುವ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಈಗಲ್ಟನ್ ರೆಸಾರ್ಟ್ ಪಕ್ಕದ ಸಾಯಿಬಾಬಾ ಮಂದಿರದ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ಕೈಗಾರಿಕಾ ಪ್ರದೇಶದದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಬೆಂಗಳೂರು&ಮೈಸೂರು ಮಾರ್ಗವಾಗಿ ಸಂಚರಿಸುವ ರೈಲ್ವೆ ಹಳಿ ಮೇಲೆ 1000 ಮೆಗಾವಾಟ್ ಸಾಮರ್ಥ್ಯದ ಕಂಬಗಳು ಹಳಿಯ ಮೇಲೆ ಬಿದ್ದ ಪರಿಣಾಮ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿತ್ತು. ಇನ್ನೂ ರೈಲ್ವೆ ಇಲಾಖೆ ಸಿಬ್ಬಂದಿ ಲೈನ್ ದುರಸ್ತಿ ಮಾಡುವಲ್ಲಿ ಮಗ್ನರಾಗಿದ್ದಾರೆ. ಸುಮಾರು 2 ಗಂಟೆಯಿಂದ ಮೈಸೂರಿನಿಂದ ಬೆಂಗಳೂರಿಗೆ ಬೆಂಗಳೂರುನಿಂದ ಮೈಸೂರು ಕಡೆ ಸಂಚರಿಸುವ ಎಲ್ಲ ರೈಲುಗಳನ್ನು ಮಧ್ಯದಲ್ಲಿ ನಿಲ್ಲಿಸಲಾಗಿದೆ ದಿನನಿತ್ಯ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಕಷ್ಟಗಳ ಹೇಳುತೀರದಾಗಿದೆ. ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ ಗೇಟ್ ಮಳೆ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಟೋಲ್ ದಾಟಲು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.