ಚನ್ನಪಟ್ಟಣ ತಾಲೂಕಿನ ಸೋಗಾಲ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸಕ್ಯೂರ್ಟ್ಗೆಶಾಮಿಯಾನ ಅಂಗಡಿ ಪಾತ್ರೆಗಳು ಭಸ್ಮಗೊಂಡಿವೆ.
ಚನ್ನಪಟ್ಟಣ: ತಾಲೂಕಿನ ಸೋಗಾಲ ಗ್ರಾಮದ ಶಾಮಿಯಾನ ಅಂಗಡಿ ಶನಿವಾರ ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸೋಗಾಲ ಗ್ರಾಮದ ಅರುಣ್ ಕುಮಾರ್ ಅವರ ಶಾಮಿಯಾನ ಅಂಗಡಿಗೆ ಬೆಳಗಿನ ಜಾವ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆಗೆ ಕುರ್ಚಿ, ಪಾತ್ರೆಗಳು, ಡಯಾಸ್, ಸೋಫಾ, ಶಾಮಿಯಾನ ಬಟ್ಟೆ, ಮ್ಯಾಟ್, ಫ್ಯಾನ್ ಸೇರಿ ಲಾಂತರ ರೂ.ಮೌಲ್ಯದ ವಸ್ತುಗಳೊಂದಿಗೆ, ಇಡೀ ಶೇಡ್ ಸಂಪೂರ್ಣ ಸುಟ್ಟಿದೆ. ಅವಡದಿಂದ ಶಾಮಿಯಾನ ಅಂಗಡಿ ಪಕ್ಕದ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್, ಪಾತ್ರೆ ಅಂಗಡಿಗೂ ಬೆಂಕಿ ತಾಗಿದ್ದು, ಈ ಅಂಗಡಿಗಳ ಕೆಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಮಾಲೀಕ ಅರುಣ್ ರಾತ್ರಿ 9ರ ಸುಮಾರಿಗೆ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದ. ಈ ಮಧ್ಯೆ ಮಧ್ಯರಾತ್ರಿ 2ರ ಸುಮಾರಿಗೆ ಅಂಗಡಿಯಿಂದ ದಟ್ಟ ಹೊಗೆ ಬರುವುದನ್ನು ಕಂಡ ಸ್ಥಳಿಯರು, ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದಾರೆ. ಅಂಗಡಿ ಬಾಗಿಲು ತೆಗೆಸಿ ಖಾಸಗಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಅಕ್ಕೂರು ಪೊಲೀಸ್ ಠಾಣೆ ಪಿಎಸ್ಐ ಆಕಾಶ್ ಭೇಟಿ ನೀಡಿ ಪರಿಶೀಲಿಸಿದರು.ಅಕ್ಕೂರುಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.