ಸ್ಥಳದಲ್ಲಿ ದೊರೆತ ನಾಡಬಾಂಬ್​ಗಳು.  
ಬೆಂಗಳೂರು ದಕ್ಷಿಣ

ಫಾಮ್ರ್ಹೌಸ್ ದ್ವಾರದಲ್ಲಿ ಸ್ಫೋಟಿಸಿದ ನಾಡಬಾಂಬ್

ಕನಕಪುರ/ಹಾರೋಹಳ್ಳಿ: ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಸುಂಡಟ್ಟದಲ್ಲಿ ನಾಡಬಾಂಬ್​ ಸ್ಫೋಟಗೊಂಡು ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಚ್ಚನ್ಯಾಯಾಲಯದ ನ್ಯಾಯವಾದಿ ಎನ್​.ಸಿ.ಮೋಹನ್​(53) ಗಾಯಗೊಂಡವರು. ತಾಲೂಕಿನ ಕಸಬಾ ಹೋಬಳಿ ಸುಂಡಟ್ಟದ ರಂಗನಾಥಸ್ವಾಮಿ ಬೆಟ್ಟದ ದಾರಿ ಬದಿ ಇರುವ ತಮ್ಮ ಎನ್​.ಸಿ.ಮೋಹನ್​ ಫಾಮ್​ರ್ ಹೌಸ್​ಗೆ ಶುಕ್ರವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಆಗಮಿಸಿ ಫಾಮ್​ರ್ ಹೌಸ್​ ಗೇಟ್​ ತೆಗೆಯುತ್ತಿದ್ದಂತೆ ನಾಡಬಾಂಬ್​ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಬೆನ್ನು, ಕತ್ತು ಸೇರಿ ಹಲವೆಡೆ ತೀವ್ರ ಗಾಯಗಳಾಗಿದ್ದು, ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಾಮ್​ರ್ ಹೌಸ್​ ಗೇಟ್​ ಬಳಿಯೇ ದುಷ್ಕರ್ಮಿಗಳು ನಾಡಬಾಂಬ್​ ಇಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಗಿರಿ, ಗ್ರಾಮಾಂತರ ಠಾಣಾ ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ಗೌಡ, ಕೋಡಿಹಳ್ಳಿ ಸಬ್​ಇನ್​ಸ್ಪೆಕ್ಟರ್​ ಪ್ರದಿಪ್​ ಮತ್ತು ಸಿಬ್ಬಂದಿ, ಬಾಂಬ್​ ನಿಷ್ಕಿಯ ದಳ ಭೇಟಿ ನೀಡಿ ಪರಿಶೀಲಿಸಿ ಎಫ್​ಎಸ್​ಎಲ್​ ಪರೀೆಗೆ ಒಳಪಡಿಸಿದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಭೇಟೆಗಾಗಿ ನಾಡಬಾಂಬ್​ ಬಳಕೆಯಲ್ಲಿದೆ. ಸ್ಫೋಟದ ಹಿನ್ನೆಲೆಯಲ್ಲಿ ಹಲವು ಸಂಶಯಗಳು ವ್ಯಕ್ತವಾಗಿದ್ದು, ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಒತ್ತಾಯ
ಸುಂಡಟ್ಟ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಲವು ವರ್ಷಗಳಿಂದ ಕೆಲವರು ಗೌಪ್ಯವಾಗಿ ನಾಡಬಾಂಬ್​ ತಯಾರಿಸಿ ಬೇರೆಬೇರೆ ಕಡೆ ಸರಬರಾಜು ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಸಂಬಂಧ ಕಳೆದ ನಾಲ್ಕೆ$ದು ತಿಂಗಳಿಂದ ಮೂರ್ನಾಲ್ಕು ಕಡೆ ನಾಡ ಬಾಂಬ್​ ಸ್ಫೋಟದಿಂದ ಹಸುಗಳ ಬಾಯಿ ಛಿದ್ರವಾಗಿ ಸಾವು ನೋವು ಸಂಭವಿಸಿದೆ. ಮಾನವ ಜೀವಕ್ಕೂ ಹಾನಿಯಾಗಿದೆ. ಇಂತಹ ಸ್ಫೋಟಕಗಳನ್ನು ತಯಾರಿಸುವುದು, ಸಂಗ್ರಹಿಸುವುದು ಕಾನೂನಿನಡಿ ಅಪರಾಧವಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.