ಪ್ರಮುಖ ಮುಖ್ಯಾಂಶಗಳು
ಚನ್ನಪಟ್ಟಣ
ಪುಣ್ಯಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ನೀರಿನ ದಾಹ ತಣಿಸಲು ಲಕ್ಷಾಂತರರೂ ವ್ಯಯಿಸಿ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಬಳಕೆಗೆಲಭ್ಯವಿಲ್ಲದಂತಾಗಿದೆ. ಕುಡಿಯುವ ನೀರಿನ ವಿಚಾರದಲ್ಲೂ ಗೋಲ್ ಮಾಲ್ ನಡೆದಿರುವ ಶಂಕೆವ್ಯಕ್ತವಾಗಿದೆ.
ಹೌದು...., ಪುರಾಣ ಪ್ರಸಿದ್ಧ ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿಪುಣ್ಯಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಮಾಡಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಈ ಘಟಕ ಕೆಲಸನಿರ್ವಹಿಸಿರುವ ಸಣ್ಣ ಕುರುಹು ಸಹ ಇಲ್ಲವಾಗಿದೆ. ಅಲ್ಲೊಂದು ಕಟ್ಟಡವಾಯಿತು..., ಯಂತ್ರಜೋಡಣೆಯಾಯಿತು.., ತದನಂತರ, ಮೂರು ದಿನ ನೀರು ಹರಿಯಿತು. ಎಂಬುದನ್ನು ಬಿಟ್ಟರೆ, ಈ ಘಟಕನಿಷ್ಕ್ರಿಯಗೊಂಡು ಹಲವಾರು ತಿಂಗಳುಗಳೇ ಕಳೆದಿವೆ.
ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ, ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ತಮ್ಮ ಐದು ಲಕ್ಷ ರೂಅನುದಾನವನ್ನು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ನೀಡಿದ್ದರು. ಈ ಘಟಕದ ನಿರ್ಮಾಣದಉಸ್ತುವಾರಿಯನ್ನು ಜಿಪಂ ಇಂಜಿನಿಯರ್ ವಿಭಾಗಕ್ಕೆ ನೀಡಲಾಗಿತ್ತು. ಈ ಘಟಕದ ನಿರ್ಮಾಣದ ಜವಾಬ್ದಾರಿಹೊತ್ತ ಗುತ್ತಿಗೆದಾರ ನೆಪ ಮಾತ್ರಕ್ಕೆ ಘಟಕನಿರ್ಮಿಸಿದ್ದಾರೆ. ಈ ಘಟಕವನ್ನು ಇದುವರೆಗೂ ಸಹ ಯಾರ ಸುಪರ್ದಿಗೂ ಸಹ ನೀಡಿಲ್ಲ. ದೇವಾಲಯದಆವರಣದಲ್ಲಿ ಕೇವಲ ಸಾಕ್ಷಿಗುಡ್ಡೆಯಾಗಿ ಸಣ್ಣ ಕಟ್ಟಡ ನಿಂತಿದೆಯೇ ಹೊರತು, ಘಟಕದಿಂದ ಯಾರೊಬ್ಬರನೀರಿನ ದಾಹ ತೀರಿಲ್ಲ ಎಂಬುದು ಮಾತ್ರ ವಿಪರ್ಯಾಸ.
ಈ ಘಟಕ ನಿರ್ಮಾಣದ ವಿಚಾರದಲ್ಲಿ ಸಂಬಂಧಿಸಿದ ಜಿಪಂ ಅಧಿಕಾರಿಗಳು(ಅಂದಿನ ಜಿಪಂ ಎಇಇ ಹಾಗೂ ಸಂಬಂಧಿಸಿದ ಎಇ) ಹಾಗೂ ಗುತ್ತಿಗೆದಾರನ ಗೋಲ್ ಮಾಲ್ ನಡೆದಿದೆ ಎಂಬ ಆರೋಪಕೇಳಿಬಂದಿದೆ. ಭಕ್ತರ ಅನುಕೂಲದ ನೆಪ ಮಾಡಿ ಶಾಸಕರ ಅನುದಾನ ತಂದ ಮಹನೀಯರು, ಕೇವಲ ಕಟ್ಟಡ ಹಾಗೂಕಳಪೆ ಗುಣಮಟ್ಟದ ಯಂತ್ರ ಜೋಡಿಸಿ ಕೈ ತೊಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅಧಿಕಾರಿಗಳುಸಹ ಸಾಥ್ ನೀಡಿದ್ದು, ನೀರಿನ ವಿಚಾರದಲ್ಲೂ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟಕನಿರ್ಮಾಣವಾಗಿ ಸುಮಾರು ಮೂರು ವರ್ಷ ಉರುಳಿದ್ದು, ಯಂತ್ರಗಳ ಇದೆಯೋ? ಇಲ್ಲವೋ? ಎಂಬ ಅನುಮಾನ ಸಹಮೂಡಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದಕೆಂಗಲ್ ಆಂಜನೇಯಸ್ವಾಮಿ ಸನ್ನಿಧಿಗೆ ಪ್ರತಿನಿತ್ಯ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಾರೆ.ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ದೇವರ ಸೇವೆ (ಬಾಡೂಟ) ಸಹ ಜೋರಾಗಿನಡೆಯುತ್ತದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಹಿಂದಿನಿಂದಲೂ ಕಾಡುತ್ತಿದ್ದು, ಇನ್ನೂಕೆಲವೇ ದಿನಗಳಲ್ಲಿ ಪ್ರಸಿದ್ಧ ದನಗಳ ಜಾತ್ರೆ ಸಹ ಆರಂಭಗೊಳ್ಳಲಿದೆ. ಈಗಲಾದರೂ, ಸಂಬಂಧಿಸಿದ ಜಿಪಂಇಂಜಿನಿಯರಿಂಗ್ ಹಾಗೂ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳು ಇತ್ತ ಗಮನಹರಿಸಿ, ಮುಂಬರುವಜಾತ್ರೆಗಾದರೂ ಈ ಘಟಕದಿಂದ ದಣಿದ ಹೊಟ್ಟೆಗಳಿಗೆ ನೀರುಣಿಸುವ ಕೆಲಸ ಮಾಡಲಿ ಎಂಬುದೇ ಪತ್ರಿಕೆಯಆಶಯವಾಗಿದೆ.
ಶ್ರೀ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿರುವುದು ಎಷ್ಟು ಸತ್ಯವೋ.. ಆ ಘಟಕಆರಂಭದಿಂದ ಇಲ್ಲಿಯವರೆಗೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಈ ಘಟಕದಲ್ಲಿಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಕನಿಷ್ಠ ಘಟಕವನ್ನು ದೇವಾಲಯ ಸಮಿತಿಗೆ ಹಸ್ತಾಂತರ ಕೆಲಸಮಾಡಿಲ್ಲ. ಅನುದಾನ ಸಣ್ಣದು ಇರಬಹುದು. ಈ ವಿಚಾರದಲ್ಲಿ ಜಿಪಂ ಹಿರಿಯ ಅಧಿಕಾರಿಗಳು ತನಿಖೆನಡೆಸಬೇಕು.
- ವಿ.ಬಿ.ಚಂದ್ರಯ್ಯ, ದೇಗುಲ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ.
ಈ ವಿಭಾಗದ ಜವಾಬ್ದಾರಿ ಹೊತ್ತಿಕೊಂಡು ಕೆಲವು ತಿಂಗಳುಗಳಾಗಿವೆ. ಈಬಗ್ಗೆ ಮಾಹಿತಿ ಸಿಕ್ಕ ಕೂಡಲೇ ವಿಚಾರಣೆ ನಡೆಸಿದ್ದೇನೆ. ಇನ್ನೆರಡು ದಿನಗಳಲ್ಲಿ ಘಟಕವನ್ನುಹಸ್ತಾಂತರಿಸುವ ಜೊತೆಗೆ, ಸಾರ್ವಜನಿಕರ ಉಪಯುಕ್ತಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ.
- ಶಿವಕುಮಾರ್, ಜಿಪಂ ಎಇಇ