ಶಾಸಕ ದರ್ಶನ್​ ಧ್ರುವ ನಾರಾಯಣ್​ ಅವರ ಮಂತ್ರಮಾಂಗಲ್ಯದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭಾಗಿ 
ಬೆಂಗಳೂರು ದಕ್ಷಿಣ

ಹಾರೋಹಳ್ಳಿಗೆ ಬಂಪರ್​ ಲಾಟರಿ!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿಕೆ -700 ಮಂದಿಗೆ ಉದ್ಯೋಗ ಸಾಧ್ಯತೆ

ಚನ್ನಪಟ್ಟಣ: ಹಾರೋಹಳ್ಳಿಯಲ್ಲಿ ಬಹುದೊಡ್ಡ ಕಂಪನಿಯೊಂದು ಹೂಡಿಕೆ ಮಾಡಲಿದ್ದು ಈ ಸಂಬಂದವಾಗಿ ಅತಿಶೀಗ್ರದಲ್ಲಿ ವಿವರ ನಿಡುವುದಾಗಿ ಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಶಾಸಕ ದರ್ಶನ್​ ಧ್ರುವ ನಾರಾಯಣ್​ ಅವರ ಮಂತ್ರಮಾಂಗಲ್ಯದಲ್ಲಿ ಪಾಲ್ಗೊಳ್ಳಲು ಗುರುವಾರ ಚನ್ನಪಟ್ಟಣದ ಪಿಟಿಎಸ್​ ಹೆಲಿಪ್ಯಾಡ್​ಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಪಾನ್​ ಪ್ರವಾಸದ ಹಿನ್ನೆಲೆಯಲ್ಲಿ ಹಾರೋಹಳ್ಳಿಗೆ ಬಂಪರ್​ ಲಾಟರಿ ಹೊಡೆದಿದೆ ಎಂದರು. ಇಲ್ಲಿ ದೊಡ್ಡ ಕಂಪನಿಯೊಂದು ಹೂಡಿಕೆ ಮಾಡಲು ಮುಂದೆ ಬಂದಿದೆ. ಅದರಿಂದಾಗಿ ಸುಮಾರು 700 ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಎಂದ ಸಿಎಂ, ಜಪಾನ್​ ಪ್ರವಾಸದ ಬಗ್ಗೆ ಸದ್ಯದಲ್ಲೆ ವಿವರವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು. ಚನ್ನಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೇಷ್ಮೆ ಮಾರುಕಟ್ಟೆ ಹಾಗೂ ಆರೋಗ್ಯ ವಿಶ್ವವಿದ್ಯಾಲಯಗಳ ಕಾಮಗಾರಿಗಳನ್ನು ಖುದ್ದಾಗಿ ಬಂದು ಪರಿಶೀಲಿಸುವುದಾಗಿಯೂ ಪ್ರಶ್ನೆಯೊಂದಕ್ಕೆ ಡಿಕೆಶಿ ಉತ್ತರಿಸಿದರು.

ಕುವೆಂಪು ಅವರು ಪ್ರತಿಪಾದಿಸಿರುವ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತಿಕವಾದ ಮಂತ್ರ ಮಾಂಗಲ್ಯದ ಮೂಲಕ ಶಾಸಕ ದರ್ಶನ್​ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಯ ಬಾಳ ಪಯಣವು ಸಂತಸ, ಸೌಹಾರ್ದ ಮತ್ತು ಸಮೃದ್ಧಿಯಿಂದ ಕೂಡಿರಲಿ.

- ಡಿ.ಕೆ.ಶಿವಕುಮಾರ್​, ಮುಖ್ಯಮಂತ್ರಿ

ಮಂತ್ರ ಮಾಂಗಲ್ಯದ ಮೂಲಕ ಶಾಸಕ ದರ್ಶನ್​ ಮದುವೆ

ನಂಜನಗೂಡು ಶಾಸಕ ಹಾಗೂ ಚಾಮರಾಜನಗರದ ಮಾಜಿ ಸಂಸದ ಆರ್​.ಧ್ರುವ ನಾರಾಯಣ್​ ಅವರ ಪುತ್ರ ದರ್ಶನ್​ ಧ್ರುವನಾರಾಯಣ್​ ಅವರು ಗುರುವಾರ ಚನ್ನಪಟ್ಟಣ ತಾಲೂಕಿನ ಜಾನಪದ ಲೋಕದಲ್ಲಿ ಮಂತ್ರಮಾಂಗಲ್ಯ ಮೂಲಕ ವೈದ್ಯೆ ಡಾ. ಶ್ರೀನಿಧಿ ಅವರನ್ನು ವರಿಸಿದರು.

ಶ್ರೀನಿಧಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆಯ ಡಾ.ಆರ್​.ರಾಜೇಶ್ವರಿ ಮತ್ತು ಎಂ.ಜಿ. ರವಿಕುಮಾರ್​ ದಂಪತಿಯ ಪುತ್ರಿ. ಮಂಡ್ಯದ ಕರ್ನಾಟಕ ಸಂದ ಅಧ್ಯ ಪೊ.ಬಿ. ಜಯಪ್ರಕಾಶ್​ ಗೌಡ ಮತ್ತು ಪೊ.ನರಸಿಂಹಮೂರ್ತಿ ಅವರು ದಂಪತಿಗೆ ಮಂತ್ರ ಮಾಂಗಲ್ಯದ ಪ್ರತಿಾ ವಿಧಿ ಬೋಧಿಸಿ ಮದುವೆ ನೆರವೇರಿಸಿ ಕೊಟ್ಟರು. ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಗೃಹ ಸಚಿವ ಪ್ರಿಯಾಂಕ್​ ರ್ಖಗೆ, ರಿಾನ್​ ಅರ್ಷದ್​, ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಆರ್​.ಮುನಿಯಪ್ಪ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿದ್ದರು. ಮದುವೆ ಆರತತೆ ಮತ್ತು ಬೀಗರ ಔತಣವು ದರ್ಶನ್​ ಅವರ ಸ್ವಗ್ರಾಮವಾದ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯಲ್ಲಿ ನ.29ರಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗೂಬೆ ಕೂರಿಸುವ ನಾಟಕ ಬಿಡಲಿ:

ರಾಮನಗರ:ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿ, ತನ್ನ ಕರ್ತವ್ಯ ನಿರ್ವಹಿಸಲಿ. ಬಳಿಕ, ಕೇಂದ್ರ ಸರ್ಕಾರದತ್ತ ನೋಡಲಿ. ಅದು ಬಿಟ್ಟು ನಮ್ಮ ಮೇಲೆ ಗೂಬೆ ಕೂರಿಸುವ ನಾಟಕ ಬಿಡಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಆಶಾ ಕಾರ್ಯಕರ್ತೆಯರ ಹೋರಾಟ ಕುರಿತು ನಗರದ ಜಾನಪದ ಲೋಕದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಕೇಂದ್ರ ಸರ್ಕಾರವನ್ನು ದೂರುವುದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ. ಇಷ್ಟು ದಿನ ಸಮಸ್ಯೆ ಬಗೆಹರಿಸದೆ ಹಾಗೆಯೇ ಬಿಟ್ಟಿದ್ದು ತಪ್ಪು. ಈಗಲಾದರೂ ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸಲಿ ಎಂದರು. ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾನವೀಯ ದೃಷ್ಟಿಯಿಂದ ಚರ್ಚಿಸಲಿ. ಬೇರೆ ರಾಜ್ಯಗಳಿಗೆ ಸ್ಪಂದಿಸಿದಂತೆಯೇ ಕರ್ನಾಟಕಕ್ಕೂ ಕೇಂದ್ರ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದ ಅಭಿವೃದ್ಧಿಗೆ ನಾವೂ ಕೈ ಜೋಡಿಸುತ್ತಿದ್ದೇವೆ ಎಂದರು. ಸಮಸ್ಯೆಯಲ್ಲಿರುವವರಿಗೆ ನ್ಯಾಯ

ಸಿಗಬೇಕು. ಬೇರೆ ರಾಜ್ಯಗಳಲ್ಲಿರುವ ಉತ್ತಮ ವ್ಯವಸ್ಥೆಯನ್ನು ಇಲ್ಲೂ ಅಳವಡಿಸುವ ಬಗ್ಗೆ ಚರ್ಚೆಯಾಗಲಿ. ರಾಜ್ಯ ಸರ್ಕಾರ ಮೊದಲು ಕಾರ್ಯಕರ್ತೆಯರ ಹೋರಾಟ ನಿಲ್ಲಿಸಿ, ಆನಂತರ ಕೇಂದ್ರಕ್ಕೆ ಬರಲಿ. ಆಗ ಕುಳಿತು ಚರ್ಚಿಸುತ್ತೇವೆ ಎಂದರು.

ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೆ ನೋಡೋಣ!

ರಾಮನಗರ: ಕೆಪಿಎಸ್​ಸಿ ನೇಮಕಾತಿ ಹಗರಣದ ಬಗ್ಗೆಯೂ ಕಾಂಗ್ರೆಸ್​ ತನಿಖೆ ನಡೆಸಲಿದೆ. ಹಿಂದೆ ಸಿಐಡಿ ನಡೆಸುತ್ತಿತ್ತು. ಇದೀಗ ಎಸ್​ಐಟಿ ನಡೆಸುತ್ತಿದೆ. ಸಮಗ್ರ ತನಿಖೆ ನಡೆಸಿ ಹಗರಣದಲ್ಲಿ ಯಾರೇ ಶಾಮೀಲಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಪ್ರಿಯಾಂಕ್​ ರ್ಖಗೆ ಹೇಳಿದರು.

ಜಾನಪದ ಲೋಕದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಯಾವತ್ತಿದ್ದರೂ ಸತ್ಯ ಆಚೆ ಬರಬೇಕು, ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೆ ನೀವೇ ಕಾದು ನೋಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇಡಿ ಅವರು ಬಿಬಿಎಂಪಿ ಎಂದ ತಕ್ಷಣ ಡಿಕೆಶಿ ಎನ್ನುತ್ತಾರೆ. ಆರ್​ಡಿಪಿಆರ್​ ಎಂದ ತಕ್ಷಣ ನನ್ನ ಹೆಸರು ಹೇಳುತ್ತಾರೆ. ಇಡಿ ಸಾವಿರಾರು ಪ್ರಕರಣ ದಾಖಲು ಮಾಡಿದೆ. ಆದರೆ ಎಷ್ಟು ಪ್ರಕರಣದಲ್ಲಿ ಶಿೆಯಾಗಿದೆ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್​ ಛೀಮಾರಿ ಹಾಕಿಲ್ವಾ, ಚುನಾವಣೆ ಬರುತ್ತಿದ್ದಂತೆ ದಾಳಿಗಳು ಇನ್ನು ಹೆಚ್ಚಾಗುತ್ತವೆೆ. ಮೋದಿ, ಅಮಿತ್​ಷಾ ಅವರ ನೀತಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಮಾತನಾಡುವವರಿಗೆಲ್ಲ ಕಾಟ ಇದ್ದಿದ್ದೇ, ಇದನ್ನು ತಪ್ಪಿಸಲು ಆಗಲ್ಲ ಎಂದರು.

ಕತ್ತೆ ಕಾಯ್ತಾ ಇದ್ದಾರಾ...: ಯಂಗ್​ ಇಂಡಿಯಾ ಟ್ರಸ್ಟ್​ ಹಾಗೂ ರ್ಖಗೆ ಅವರಿಗೂ ಏನು ಸಂಬಂಧ? ಐಟಿ, ಇಡಿ ಕೇಸ್​ ಹಾಕಿಲ್ವಾ? ರಾಹುಲ್​ ಗಾಂಧಿ, ರಾರ್ಬಟ್​ ವಾದ್ರಾ ಹೆಸರು ತೆಗೆದುಕೊಂಡರು. 13 ವರ್ಷದಿಂದ ಕತ್ತೆ ಕಾಯ್ತಾ ಇದ್ದಾರಾ? ಕೇಂದ್ರ ಯಾವುದನ್ನು ಸಾಬೀತು ಮಾಡಿಲ್ಲ. ಐಟಿ, ಇಡಿ ದಾಳಿ ನಂತರ ಬಿಜೆಪಿ ಸೇರಿದ ನಾಯಕರ ಅಪರಾಧ ಎಲ್ಲ ಸ್ವಚ್ಛವಾಗಿಬಿಡುತ್ತದೆ ಎಂದು ಪ್ರಿಯಾಂಕ್​ ರ್ಖಗೆ ವಾಗ್ದಾಳಿ ನಡೆಸಿದರು.